More

    ಮೋದಿ ಸರ್ಕಾರದ ಯೋಜನೆ ಲಾಭ ಪಡೆದುಕೊಂಡ ವಾರೀ ಎನರ್ಜಿಸ್​: 400 ಮೆಗಾ ವ್ಯಾಟ್​ನ ದೊಡ್ಡ ಗುತ್ತಿಗೆ, ಐಪಿಒ ಬಿಡುಗಡೆಗೆ ತಯಾರಿ

    ಮುಂಬೈ: ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ವಾರೀ ಎನರ್ಜಿಸ್ ಕಂಪನಿಯು ಗುಜರಾತ್​ ಇಂಡಸ್ಟ್ರೀಸ್ ಪವರ್ ಕಂಪನಿಯಿಂದ 400 ಮೆಗಾ ವ್ಯಾಟ್ ಮಾಡ್ಯೂಲ್‌ಗಳ ಪೂರೈಕೆಯ ಗುತ್ತಿಗೆಯನ್ನು ಪಡೆದುಕೊಂಡಿದೆ.

    ಈ ಒಪ್ಪಂದದ ಅಡಿಯಲ್ಲಿ, ವಾರೀ ಎನರ್ಜಿಸ್ ಲಿಮಿಟೆಡ್ ಸೌರ ಪಿವಿ ಮಾಡ್ಯೂಲ್‌ಗಳನ್ನು ಒದಗಿಸುತ್ತದೆ. 2,375 MW ಸಾಮರ್ಥ್ಯದ ನವೀಕರಿಸಬಹುದಾದ ಇಂಧ ಪಾರ್ಕ್‌ಗಾಗಿ ಸುಧಾರಿತ ಬೈಫೇಶಿಯಲ್ ತಂತ್ರಜ್ಞಾನವನ್ನು ಖಾವ್ಡಾ, ಗ್ರೇಟ್ ರನ್ ಆಫ್ ಕಚ್​ನಲ್ಲಿ ಸಂಯೋಜಿಸಲಿದೆ.

    ವಾರೀ ಎನರ್ಜಿಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಿತೇಶ್ ಚಿಮನ್‌ಲಾಲ್ ದೋಷಿ ಮಾತನಾಡಿ, “ಈ ಯೋಜನೆಯಲ್ಲಿ ಗುಜರಾತ್ ಇಂಡಸ್ಟ್ರೀಸ್ ಪವರ್‌ನೊಂದಿಗೆ ಸಹಕರಿಸಲು ನಮಗೆ ಗೌರವವಿದೆ ಎಂದಿದ್ದಾರೆ.

    ಗುಜರಾತ್​ ಕಂಪನಿಯಾಗಿರುವ ವಾರೀ ಎನರ್ಜಿಸ್ ಒಟ್ಟು 12 GW ಸಾಮರ್ಥ್ಯದೊಂದಿಗೆ ಭಾರತದಲ್ಲಿ ಸೌರ ಪಿವಿ ಮಾಡ್ಯೂಲ್‌ಗಳ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ.

    ಸರ್ಕಾರವು ಇತ್ತೀಚೆಗೆ ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಿಂದ ಹೆಚ್ಚು ಲಾಭ ಪಡೆಯುವ ಕಂಪನಿಯಾಗಿ ವಾರೀ ಎನರ್ಜಿಯನ್ನು ನೋಡಲಾಗುತ್ತಿದೆ. ಕಂಪನಿಯು ಭಾರತದಲ್ಲಿ 380ಕ್ಕೂ ಹೆಚ್ಚು ಸ್ಥಳಗಳಲ್ಲಿ ಮತ್ತು ಪ್ರಪಂಚದಾದ್ಯಂತ 20ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ನರೇಂದ್ರ ಮೋದಿ ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಸರ್ಕಾರದ ಸಬ್ಸಿಡಿ ಮೂಲಕ ಸೌರ ಫಲಕಗಳ ಅಳವಡಿಕೆ ಮೂಲಕ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ.

    ವಾರೀ ಎನರ್ಜಿಸ್​ ತನ್ನ ಐಪಿಒ ಬಿಡುಗಡೆ ಮಾಡಲು ಸೆಬಿಗೆ ಡಿಸೆಂಬರ್ 2023 ರಲ್ಲಿ ಅರ್ಜಿ ಸಲ್ಲಿಸಿದೆ. ಈಗ ಕಂಪನಿಯು 3,000 ಕೋಟಿ ಮೌಲ್ಯದ ತಾಜಾ ಷೇರುಗಳನ್ನು ನೀಡಲು ಮತ್ತು 32,00,000 ಈಕ್ವಿಟಿ ಷೇರುಗಳ ಮಾರಾಟಕ್ಕೆ (OFS) ಯೋಜಿಸಿದೆ.

    ವಾರೀ ಎನರ್ಜಿಸ್ ಮಾರ್ಚ್ 31, 2023ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 6,840 ಕೋಟಿ ರೂಪಾಯಿಯ ಆದಾಯ ಗಳಿಸಿದೆ. ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು 501 ಕೋಟಿ ರೂ. ಇದೆ. ಇದರ ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 2,950 ಕೋಟಿ ಮತ್ತು ಲಾಭ 79 ಕೋಟಿ ರೂ. ಇತ್ತು.

    ಕ್ಯಾರಿಯರ್​ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಅದಾನಿ ಗುಂಪಿನ ಜತೆ ಮಾಡಿಕೊಂಡ ಒಪ್ಪಂದವೇನು?

    ಕ್ಯಾರಿಯರ್​ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಅದಾನಿ ಗುಂಪಿನ ಜತೆ ಮಾಡಿಕೊಂಡ ಒಪ್ಪಂದವೇನು?

    ರೂ. 404ರಿಂದ 27ಕ್ಕೆ ಕುಸಿದ ಬ್ಯಾಂಕ್​ ಷೇರು ಬೆಲೆ: ತ್ರೈಮಾಸಿಕ ಲಾಭ ಹೆಚ್ಚಾಗುತ್ತಿದ್ದಂತೆಯೇ ಸ್ಟಾಕ್​ ಬೆಲೆ ಜಿಗಿತ

    ಅಮೆರಿಕದ ಎಫ್​ಡಿಎನಿಂದ ಬಂದಿತು ಸಂತಸದ ಸುದ್ದಿ: ಫಾರ್ಮಾ ಕಂಪನಿ ಷೇರು ಬೆಲೆ 2 ದಿನಗಳಲ್ಲಿಯೇ 40% ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts