

ಧಾರವಾಡ: ತಮ್ಮ ಗ್ರಾಮದ ಯುವತಿಯೊಂದಿಗೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಏಕಕಾಲದಲ್ಲಿ ಮೂವರಿಗೆ ಚಾಕುವಿನಿಂದ ಇರಿದಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಕಿರಣ್ ಪೂಜಾರ್, ಆಸಿಫ್ ಹಾಗೂ ಶಾನ್ವಾಜ್ ಚಾಕು ಇರಿತಕ್ಕೊಳಗಾದವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಧಾರವಾದ ಉಪನಗರ ಪೊಲೀಸರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ಗೆ ರವಾನಿಸಿದ್ದಾರೆ.
ಧಾರವಾದ ಜಿಲ್ಲೆ ಮುಗದ ಗ್ರಾಮದ ಯುವಕ ಕಿರಣ್ ಪೂಜಾರ್ ಎಂಬಾತ ಯುವತಿಯೊಂದಿಗೆ ಮಾತನಾಡುತ್ತಾ ನಿಂತಿದ್ದ. ಈ ವೇಳೆ ಅಮ್ಮಿನಬಾವಿ ಗ್ರಾಮದ ನಿವಾಸಿ ಸಾಹಿಲ್ ಎಂಬಾತ ಅಲ್ಲಿಗೆ ಬಂದಿದ್ದು, ತಮ್ಮ ಊರಿನ ಯುವತಿಯೊಂದಿಗೆ ಯುವಕ ಮಾತನಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಸಾಹಿಲ್ ಆಕ್ಷೇಪಕ್ಕೆ ಕೆರಳಿದ ಕಿರಣ್ ಪೂಜಾರ್ ಆತನ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾಗಿದ್ದ ಸಾಹಿಲ್ ಕೂಡಲೇ ತನ್ನ ಸ್ನೇಹಿತರ ಜೊತೆ ಬಂದಿದ್ದು, ಕಿರಣ್ ಹಾಗೂ ಆತನ ಇಬ್ಬರು ಸ್ನೇಹಿತರಾದ ಆಸಿಫ್, ಶಾನ್ವಾಜ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆಸಿಫ್ ಎಂಬಾತನ ಹೊಟ್ಟೆಯಲ್ಲಿಯೇ ಚಾಕುವನ್ನೂ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ಗೆ ರವಾನಿಸಿದ್ದಾರೆ. ಪ್ರಕರಣ ದಾಕಲಿಸಿಕೊಂಡಿರುವ ಪೊಲೀಸರು ತಲೆಮಾರಿಸಿಕೊಂಡಿರುವ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.