ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ..

Accident
Published on

ಕಲಬುರಗಿ: ರಸ್ತೆ ಬದಿ ನಿಂತಿದ್ದ ಲಾರಿಯೊಂದು ಮಗುಚಿ ಕಾರಿನ ಮೇಲೆ ಬಿದ್ದು ಒಬ್ಬನನ್ನು ಬಲಿ ಪಡೆದ ಪ್ರಕರಣದ ಬೆನ್ನಿಗೇ ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಕಟ್ಟಿಸಂಗಾವಿ ಗ್ರಾಮದ ಹಸನಾಪುರ‌ ಕ್ರಾಸ್ ಸಮೀಪ ಭೀಮಾ ನದಿ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಆಕಾಶ್ ಬಡಿಗೇರ್ (21), ಶಿವು ಮ್ಯಾಗೇರಿ (21) ಮತ್ತು ಲಕ್ಷ್ಮಣ್ ಮಲವಾಡಿ (18) ಸಾವಿಗೀಡಾದವರು. ಈ ಮೂವರು ಎಸ್​.ಎನ್​. ಹಿಪ್ಪರಗಿ ಗ್ರಾಮದವರು.

ನಾಗಾವಿ ಯಲ್ಲಮ್ಮ ದೇಗುಲದಲ್ಲಿ‌ ಪೂಜೆ ಮುಗಿಸಿಕೊಂಡು ಬಾಡೂಟ ಮಾಡಿಕೊಂಡು ಇವರು ವಾಪಸ್​ ಹೋಗುತ್ತಿದ್ದರು. ಮಾರ್ಗಮಧ್ಯೆ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮೂವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಲಬುರಗಿ ಸಂಚಾರಿ 1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net