ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಪಡೆದು ಮರಳುತ್ತಿದ್ದ ಮೂವರು ಸ್ನೇಹಿತರು ಅಪಘಾತಕ್ಕೆ ಬಲಿ; ಇಬ್ಬರು ಸ್ಥಳದಲ್ಲೇ ಸಾವು

Friends
Published on

ದಾವಣೆಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಚನ್ನಗಿರಿ ತಾಲೂಕಿನ ಮಲ್ಲೇಶ್ವರ ಗ್ರಾಮದ ಅಜ್ಜಯ್ಯ (21), ದೇವರಾಜ (18), ಮಂಜುನಾಥ್ (18) ಮೃತಪಟ್ಟವರು. ಈ ಮೂವರು ಸ್ನೇಹಿತರು ಚೌತಿ ಪ್ರಯುಕ್ತ ಗ್ರಾಮದಲ್ಲಿ ಗಣೇಶನನ್ನು ಕೂರಿಸಲು ಅನುಮತಿ ಪಡೆಯುವ ಸಲುವಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿದ್ದರು.

ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಸಿಕ್ಕ ಸಂತೋಷದಲ್ಲಿ ಬೈಕ್​ನಲ್ಲಿ ಮರಳುತ್ತಿದ್ದ ಇವರು ಅಪಘಾತಕ್ಕೀಡಾಗಿದ್ದು, ಮೂವರೂ ಸಾವಿಗೀಡಾಗಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net