ಒಂದೇ ಒಂದು ನಿರ್ಧಾರ; ಭಾರತದಲ್ಲಿನ ನಾಲ್ಕು ಸಾವಿರ ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿ..!

F 1
Published on

ನವದೆಹಲಿ: ಭಾರತದಲ್ಲಿನ ಸುಮಾರು ನಾಲ್ಕು ಸಾವಿರ ಉದ್ಯೋಗಿಗಳ ಭವಿಷ್ಯ ಆತಂಕದಲ್ಲಿದ್ದು, ಮುಂದೇನು ಎಂಬ ಚಿಂತೆ ಅವರನ್ನು ಕಾಡಲಾರಂಭಿಸಿದೆ. ಅಷ್ಟಕ್ಕೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಆತಂಕಕ್ಕೆ ತಳ್ಳಿರುವುದು ಅವರು ಕೆಲಸ ಮಾಡುತ್ತಿರುವ ಕಂಪನಿಯ ಒಂದೇ ಒಂದು ನಿರ್ಧಾರ.

ಫೋರ್ಡ್​ ಕಂಪನಿಯು ಭಾರತದಲ್ಲಿನ ಕಾರು ಉತ್ಪಾದಿಸುವ ಎರಡು ಘಟಕಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ನಿರ್ಧರಿಸಿರುವುದೇ ಇಷ್ಟಕ್ಕೆಲ್ಲ ಕಾರಣ. ಸನಂದ್​ ಘಟಕ ಹಾಗೂ ಚೆನ್ನೈನ ಇಂಜಿನ್​ ಹಾಗೂ ವೆಹಿಕಲ್ ಅಸೆಂಬ್ಲಿ ಪ್ಲ್ಯಾಂಟ್​ನಲ್ಲಿ ದೇಶೀಯ ಬಳಕೆಯ ಕಾರುಗಳ ಉತ್ಪಾದನೆಯನ್ನು ಕಂಪನಿ ನಿಲ್ಲಿಸಿದೆ.

ಹೀಗೆ ಎರಡು ಉತ್ಪಾದನಾ ಘಟಕಗಳನ್ನು ಹಠಾತ್ ಆಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ಇಲ್ಲಿ ಕೆಲಸ ಮಾಡುವ ಸುಮಾರು 4 ಸಾವಿರ ಉದ್ಯೋಗಿಗಳನ್ನು ಮುಂದೇನು ಎಂಬ ಆತಂಕದಲ್ಲಿದ್ದಾರೆ. 'ಕಂಪನಿಯು ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 2 ಬಿಲಿಯನ್ ಡಾಲರ್​ಗೂ ಅಧಿಕ ಹೂಡಿಕೆ ಮಾಡಿದ್ದರೂ ನಷ್ಟ ಉಂಟಾಗಿದೆ. ಮತ್ತೊಂದೆಡೆ ವಾಹನಗಳ ಮಾರಾಟದಲ್ಲೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ' ಎಂಬುದಾಗಿ ಫೋರ್ಡ್ ಮೋಟಾರ್ ಕಂಪನಿಯ ಸಿಎಒ ಮತ್ತು ಅಧ್ಯಕ್ಷರೂ ಆಗಿರುವ ಜಿಮ್​ ಫಾರ್ಲೆ ಸಮಜಾಯಿಷಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net