ಹಬ್ಬದ ದಿನವೇ ಸೂತಕದ ಛಾಯೆ! ಈಜಲು ಹೋದ ಮೂವರು ಬಾಲಕರು ನೀರು ಪಾಲು, ಹೆತ್ತವರ ಆಕ್ರಂದನ

ವಿಜಯವಾಣಿ - 2025-03-30T190216.096
Published on

ಬಾಗಲಕೋಟೆ: ಯುಗಾದಿ ಹಬ್ಬದ ದಿನವೇ ಕೃಷ್ಣಾ ನದಿಯಲ್ಲಿ ಈಜಾಡಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾದ ದುರ್ಘಟನೆ ಬಾಗಲಕೋಟೆ ತಾಲೂಕಿನ‌ ಸೀತಿಮನಿಯಲ್ಲಿ ಸಂಭವಿಸಿದೆ.

ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ದೃಢವಾಗಿದೆ. ಮೃತರನ್ನು ಸೋಮಶೇಖರ್ ದೇವರಮನಿ(15), ಪರನಗೌಡ ಬೀಳಗಿ(17) ಮತ್ತು ಮಲ್ಲಪ್ಪ ಬಗಲಿ(16) ಎಂದು ಗುರುತಿಸಲಾಗಿದೆ.

ಬಾಲಕ ಸೋಮಶೇಖರ್​ನ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ದೇಹ ಪತ್ತೆಯಾಗಬೇಕಿದೆ. ಅಗ್ನಿಶಾಮಕ ಸಿಬ್ಬಂದಿಗಳಿಂದ ಬಿರುಸಿನ ಶೋಧ ಮುಂದುವರಿದಿದ್ದು, ಬಾಲಕರ ದೇಹವನ್ನು ಹೊರತರುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದ ನಿವಾಸಿಗಳು ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net