

IPL 2025: ನಿನ್ನೆ (ಮಾ.29) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ 36 ರನ್ನಿಂದ ಜಯ ಸಾಧಿಸಿತು. ಈ ಮ್ಯಾಚ್ನಲ್ಲಿ ಗುಜರಾತ್ ಪರ ಅಮೋಘ ಬ್ಯಾಟಿಂಗ್ ನಡೆಸಿದ ಸಾಯಿ ಸುದರ್ಶನ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟೀಮ್ ಇಂಡಿಯಾ ಯುವ ಬ್ಯಾಟರ್ನ ಐಪಿಎಲ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, "41 ಎಸೆತದಲ್ಲಿ 63 ರನ್ ಬಾರಿಸಿದ ಸಾಯಿ ಅವರ ಬ್ಯಾಟಿಂಗ್ ನಿಜಕ್ಕೂ ಅದ್ಭುತವಾಗಿತ್ತು. ತಮ್ಮ ಬ್ಯಾಟ್ನಿಂದ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸುದರ್ಶನ್ರ ಬ್ಯಾಟಿಂಗ್ ವೈಖರಿಯನ್ನು ಗಮನಿಸಿದರೆ, ಅವರು ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಉತ್ತಮ ಆಯ್ಕೆ" ಎಂದರು.
"ಸಾಯಿ ಸುದರ್ಶನ್ ಹೊಡೆದ ಮೂರು ಹೊಡೆತಗಳು ನಿಜವಾಗಿಯೂ ನನ್ನ ಗಮನವನ್ನು ಸೆಳೆಯಿತು. ಮೊದಲು, ಅವರು ಮೈದಾನದಿಂದ ಇಳಿದು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಬಾರಿಸಿದರು. ಅದು ಅದ್ಭುತ ಶಾಟ್ ಆಗಿತ್ತು. ನಂತರ, ಅವರು ಮಿಡಲ್ ಸ್ಟಂಪ್‌ಗೆ ಗುರಿಯಿಟ್ಟುಕೊಂಡಿದ್ದ ಬಾಲ್ನ ಮಿಡ್‌ವಿಕೆಟ್ ಕಡೆಗೆ ಫ್ಲಿಕ್ ಮಾಡಿ ಬೌಂಡರಿ ಹೊಡೆದರು. ಕೊನೆಯದಾಗಿ, ಅವರು ಸ್ಪಿನ್ನರ್ ಬೌಲಿಂಗ್‌ನಲ್ಲಿ ನೇರ ಸಿಕ್ಸರ್ ಬಾರಿಸಿದರು. ಇವು ನಿಜಕ್ಕೂ ಗಮನಿಸಬೇಕಾದ ಅಂಶ. ಈ ವ್ಯಕ್ತಿ ಅಸಾಧಾರಣ. ಟೆಸ್ಟ್ ತಂಡಕ್ಕೆ ಇವರು ಸೂಕ್ತ" ಎಂದು ಚೋಪ್ರಾ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).