ಶ್ರೀರಾಮನವಮಿ ಆಚರಿಸಿ ಹೋಗುತ್ತಿದ್ದವರನ್ನ ಅಡ್ಡಗಟ್ಟಿ ಅನ್ಯಕೋಮಿನ ಯುವಕರಿಂದ ಬೆದರಿಕೆ!

bangalore
Published on

ಬೆಂಗಳೂರು: ಇಂದು ಎಲ್ಲೆಡೆ ರಾಮನಮಮಿ ಸಂಭ್ರಮ. ಶ್ರೀರಾಮನವಮಿ ಮುಗಿಸಿ ಬರುತ್ತಿದ್ದ ವಾಹನವನ್ನು ಅಡ್ಡಹಾಕುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ನಡೆದಿದೆ.

ಶ್ರೀರಾಮನವಮಿ ಆಚರಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿದ ಇಬ್ಬರು ಯುವಕರು ಕಾರಿನ ಬಳಿ ಬಂದು ಜೈ ಶ್ರೀರಾಮ್ ಇಲ್ಲ, ಓನ್ಲೀ ಅಲ್ಲಾ ಹು ಅಕ್ಬರ್ ಎಂದು ಹೇಳಿದ್ದಾರೆ ಎಂದು ಖಾಸಗಿ ಸುದ್ದಿ ಮಾದ್ಯಮ ವರದಿ ಮಾಡಿದೆ. ಇದಲ್ಲದೆ ಕಾರಿನಲ್ಲಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ನಾವು ನಿಮ್ಮ ಹಬ್ಬದ ಸಮಯದಲ್ಲಿ ಇದೇ ರೀತಿ ಮಾಡ್ತೀವಾ ಎಂದು ಕಾರಿನಲ್ಲಿದ್ದ ಹಿಂದೂ ಯುವಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅವರು, ಕಾರಿನಲ್ಲಿದ್ದ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಮಧ್ಯೆ ಪುಂಡಾಟ ಮೆರೆದಿದ್ದ ಯುವಕರಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net