

ಹುಬ್ಬಳ್ಳಿ: ಮನೆಯಲ್ಲಿರುವ ತಂದೆಯ ಆರೈಕೆ ಮಾಡು ಎಂದು ಮಾಜಿ ಮೇಯರ್ ಒಬ್ಬರು ವ್ಯಕ್ತಿಯೊಬ್ಬನನ್ನು ನೇಮಿಸಿದ್ದರೆ, ಆತ ಅವರ ಮನೆಯಲ್ಲೇ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಕೇರ್ ಟೇಕರ್ ಆಗಿರು ಎಂದವನು ಮನೆಯಲ್ಲಿರುವ ವಸ್ತುಗಳನ್ನು ಎತ್ತಿಕೊಂಡು ಹೋಗಿ ತಲೆಮರೆಸಿಕೊಂಡಿದ್ದಾನೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ತಾಂಡಾದ ಅರುಣ ನಾಯಕ ಎಂಬವನೇ ಆರೋಪಿ. ವಿಜಯನಗರದಲ್ಲಿರುವ ಮಾಜಿ ಮೇಯರ್ ವೀರಣ್ಣ ಸವಡಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಇವರು ತಮ್ಮ ತಂದೆಯ ಆರೈಕೆಗೆಂದು ಅರುಣ್ ನಾಯಕನನ್ನು ನೇಮಿಸಿದ್ದರು.
ಮನೆಯ ಬೆಡ್ ರೂಮಿನ ಕಪಾಟಿನಲ್ಲಿದ್ದ 1.32 ಲಕ್ಷ ರೂಪಾಯಿ ಮೌಲ್ಯದ ಆಭರಣ, 23 ಸಾವಿರ ರೂಪಾಯಿ ನಗದು, ಐದು ಸಾವಿರ ರೂ. ಮೌಲ್ಯದ ವಾಚ್ಗಳನ್ನು ಅರುಣ್ ಕಳವು ಮಾಡಿಕೊಂಡು ಹೋಗಿದ್ದಾನೆ. ಈ ಸಂಬಂಧ ಅಶೋಕನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.