ಇನ್ನು ಒಂದು ವಾರ ಕಳೆದರೆ ಚುನಾವಣೆ; ಆದರೆ ಇಂದೇ ಅಭ್ಯರ್ಥಿಯ ಸಾವು!

Candidate
Published on

ಶಿವಮೊಗ್ಗ: ಎಲ್ಲವೂ ಅಂದುಕೊಂಡಂತೆಯೇ ಮುಂದುವರಿದಿದ್ದರೆ, ಇವರು ಇನ್ನೊಂದು ವಾರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಮತ ಚಲಾಯಿಸುವ ಜತೆಗೆ, ಗೆಲುವಿನ ನಿರೀಕ್ಷೆಯಲ್ಲಿ ಇರುತ್ತಿದ್ದರು. ಆದರೆ ದುರದೃಷ್ಟವಶಾತ್ ಇಂದೇ ಇಹಲೋಕ ತ್ಯಜಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶ್ರುತಿ ಮಂಜುನಾಥ್ ಮೃತಪಟ್ಟವರು. ಇವರು ಏ. 27ರಂದು ನಡೆಯಲಿರುವ ಭದ್ರಾವತಿ ನಗರಸಭೆ ಚುನಾವಣಾ ಅಭ್ಯರ್ಥಿ ಆಗಿದ್ದರು. ಭದ್ರಾವತಿಯ 29ನೇ ವಾರ್ಡ್​ನಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಬೆಳಗ್ಗೆ ಶ್ರುತಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net