

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಗ್ರಾಮೀಣ ಭಾಗದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ಶಾಂತಿನಿಕೇತನ ಸಂಸ್ಥೆ ನೀಡಿದ ಕೊಡುಗೆ ಮಹತ್ತರ. ಸಮಾಜಮುಖಿ ಕೆಲಸ ಮಾಡುವವರಿಗೆ ನಾವು ಬೆಂಬಲಿಸಿದಾಗ ಸಂಸ್ಥೆಯು ಬೆಳೆಯುತ್ತದೆ. ಜನರೊಂದಿಗೆ ಇದ್ದ ಸೇವೆ ಮಾಡುತ್ತಿರುವ ಶಾಂತಿನಿಕೇತನದ ಕಾರ್ಯ ಸಮಾಜಕ್ಕೆ ಹೆಮ್ಮೆ ಎಂದು ಮುನಿಯಾಲು ಗೋಪಿನಾಥ್ ಭಟ್ ಹೇಳಿದರು.
ಕುಡಿಬೈಲ್ ಕುಚ್ಚೂರು ಶಾಂತಿನಿಕೇತನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಾಂತಿನಿಕೇತನ ಯುವ ವೃಂದದ ವಾರ್ಷಿಕ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲಿತಿನ್ ಮಾತನಾಡಿ, ಜೀವನದಲ್ಲಿ ಪ್ರಯತ್ನಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ನಿಸ್ವಾರ್ಥ ಸೇವೆ ನೀಡುತ್ತಿರುವ ಶಾಂತಿನಿಕೇತನ ಇತರರಿಗೆ ಮಾದರಿಯಾಗಿದೆ ಎಂದರು.
ಕುಚ್ಚೂರು ಗ್ರಾ.ಪಂ. ಸದಸ್ಯೆ ಸುಜಾತಾ ಶೆಟ್ಟಿ, ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಪೂಜಾರಿ, ಶಾಂತಿನಿಕೇತನ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಜಯಕರ್, ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ ಎಸ್., ಪ್ರಸನ್ನ, ನಳಿನಿ, ನವೀನ್ ಶೆಟ್ಟಿ, ಕೆ.ಗಣೇಶ್, ಶ್ರೀನಿವಾಸ ಶೆಟ್ಟಿ, ರೇಷ್ಮಾ, ದೀಕ್ಷಿತ್ ನಾಯಕ್, ನಾಗರಾಜ್, ರಘುರಾಮ್ ಶೆಟ್ಟಿ, ರಾಜೇಶ್ ಇದ್ದರು. ನರೇಂದ್ರ ಸ್ವಾಗತಿಸಿದರು. ಸಂಸ್ಥಾಪಕ ರಾಜೇಶ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೆಸ್ಟ್ ಮೆಂಬರ್ ಆಗಿ ನರೇಂದ್ರ ಎಸ್., ಯುವವೃಂದ ಲಕ್ಕಿ ಮೆಂಬರ್ ಆಗಿ ಸುಧಾಕರ್, ವಿದ್ಯಾರ್ಥಿ ಘಟಕದ ಲಕ್ಕಿ ಮೆಂಬರ್ ಆಗಿ ಪ್ರೀಶಾ ಆಯ್ಕೆಯಾದರು. ಸುವರ್ಣ ಬ್ರದರ್ಸ್, ಕರುಣಾಕರ ಹೆಗ್ಡೆ ಬಚ್ಚಪ್ಪು, ಗೌರಿ ಸ್ಮರಣಾರ್ಥ ಚೇತನ ಬಸವಾನಿ, ಶಶಿಕಲಾ ಸಂಜೀವ ಮರಸಣಿಗೆ ಮತ್ತು ಕಲಾವತಿ ಕುಡಿಬೈಲು ಪ್ರಾಯೋಜಕತ್ವದ ವಿದ್ಯಾರ್ಥಿ ವೇತನ, ಶಾಂತಿನಿಕೇತನ ಸೌಹಾರ್ದ ಸಹಕಾರಿ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಿತಿನ್, ಚೈತನ್ಯ, ಕೀರ್ತನ್, ಪೃಥ್ವಿ ಆಚಾರ್ಯ, ಕೃತಿಕಾ ವಿದ್ಯಾರ್ಥಿ ವೇತನ ಸ್ವೀಕರಿಸಿದರು. ಡಾ.ಲಿತಿನ್, ದೀಕ್ಷಿತ್ ನಾಯಕ್, ಶ್ರೀನಿವಾಸ್ ನಾಯ್ಕ ಚಾರ ಅವರನ್ನು par ಸನ್ಮಾನಿಸಲಾಯಿತು.