

ಕುಂದಾಪುರ: ಕಳೆದ ನಾಲ್ಕೈದು ವರ್ಷಗಳಿಂದ ಸುದ್ದಿಯಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆಗಳು ಮಳೆ ಆರಂಭವಾಗುತ್ತಿದ್ದಂತೆ ಈ ಬಾರಿಯೂ ಮತ್ತೆ ಸುದ್ದಿಯಲ್ಲಿವೆ.
ನಗರದ ಶಾಸಿ ಸರ್ಕಲ್ ಎದುರಿನಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ್ಲೈ ಓವರ್ನ ಇಕ್ಕೆಲಗಳಲ್ಲಿ ನಿರ್ವಾಣವಾಗಿರುವ ಸರ್ವೀಸ್ ರಸ್ತೆಗಳಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ. ಸರ್ವೀಸ್ ರಸ್ತೆಯ ಮೇಲ್ಭಾಗದಲ್ಲಿ ಸಂಗ್ರಹವಾಗುವ ನೀರು ಹರಿಯಲು ನಿರ್ಮಿಸಿರುವ ಕಾಂಕ್ರೀಟ್ ತೋಡುಗಳು ಅವೈಜ್ಞಾನಿಕವಾಗಿದ್ದು, ರಸ್ತೆಗಿಂತ ಎತ್ತರದಲ್ಲಿವೆ. ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದ್ದು ತೋಡುಗಳಲ್ಲಿ ಸರಾಗವಾಗಿ ಹರಿಯುತ್ತಿಲ್ಲ.
ರಸ್ತೆಯಲ್ಲೇ ಹರಿಯುವ ನೀರು: ಕೆಎಸ್ಆರ್ಟಿಸಿ ನಿಲ್ದಾಣದಿಂದ ವಿನಾಯಕ ಟಾಕೀಸ್ವರೆಗೂ ಎಲ್ಲೆಂದರಲ್ಲಿ ಗುಂಡಿಗಳಲ್ಲಿ ಕೃತಕ ಕೆರೆ ನಿರ್ವಾಣವಾಗುತ್ತಿದೆ. ್ಲೈ ಓವರ್ ಹಾಗೂ ಎಂಬ್ಯಾಕ್ಮೆಂಟ್ ಮೇಲಿನ ರಸ್ತೆಗಳಲ್ಲಿ ಸಂಗ್ರಹವಾಗುವ ನೀರು, ಸರ್ವೀಸ್ ರಸ್ತೆಗೆ ಹರಿದು ಬರುವುದರಿಂದ, ಸಣ್ಣ ಮಳೆಗೂ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ. ಕಳೆದ 4 ವರ್ಷಗಳಿಂದಲೂ ಈ ಸಮಸ್ಯೆ ಪರಿಹಾರ ಕಾಣದಿರುವುದು ಹೆದ್ದಾರಿ ಇಲಾಖೆಯ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ.
ಬಸ್ರೂರು ಮೂರುಕೈ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಹೋಟೆಲ್ ಯುವ ಮನೀಶ್, ಟಿ.ಟಿ.ರಸ್ತೆ ಅಂಡರ್ ಪಾಸ್ ಹಾಗೂ ಶಾಂತಿ ನಿಕೇತನ್ ಬಳಿಯಲ್ಲಿನ ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಂತು ಸುಗಮ ಸಂಚಾರಕ್ಕೆ ತಡೆಯಾಗಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಮೂರು ಬಾರಿ ಇಲ್ಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆ ಸೂಚನೆ ನೀಡಿದ್ದರು. ಮಳೆ ಆರಂಭವಾದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಮಳೆಗಾಲಕ್ಕೂ ಮುನ್ನ ನಡೆಯಬೇಕಾಗಿದ್ದ ಕಾಮಗಾರಿಗಳು ಸಮರ್ಪಕವಾಗಿ ನಡೆಯಲಿಲ್ಲ. ಮಳೆ ಸುರಿಯುವಾಗ ್ಲೈಓವರ್ ಮೇಲೆ ವಾಹನಗಳು ಸಂಚರಿಸಿದರೆ ಸರ್ವೀಸ್ ರಸ್ತೆಯಲ್ಲಿ ಹೋಗುವ ಎಲ್ಲ ವಾಹನಗಳ ಮೇಲೆ ನೀರಿನ ಅಭಿಷೇಕವಾಗುತ್ತದೆ.