

ಬ್ರಹ್ಮಾವರ: ಹಂದಾಡಿ ಐದುಬೆಟ್ಟು ಶ್ರೀ ವೈದ್ಯನಾಥ ಧೂಮಾವತಿ ದೈವಕ್ಷೇತ್ರ ನೂತನ ಮೂರ್ತಿಯೊಂದಿಗೆ ಸಂಪೂರ್ಣ ನವೀಕೃತಗೊಂಡು ಮೇ 24 ಮತ್ತು 25ರಂದು ಕೇಂಜ ಶ್ರೀಧರ ತಂತ್ರಿಗಳ ಪೌರೋಹಿತ್ಯ ಮತ್ತು ಅರ್ಚಕ ಹಂದಾಡಿ ಭಾಸ್ಕರ ಉಡುಪರ ಉಪಸ್ಥಿತಿಯಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಮರ್ಪಣೆಗೊಂಡು ಪುನರ್ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಭಾನುವಾರ ಜರುಗಿತು.
ಶನಿವಾರ ಸಂಜೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೈವಗಳ ಮುಖ ಮೂರ್ತಿಯ ಮೆರವಣಿಗೆ ಮತ್ತು ಹಸಿರು ಹೊರೆಕಾಣಿಕೆ ಮೆರವಣಿಗೆ ನಾನಾ ಟ್ಯಾಬ್ಲೊಗಳ ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ದೈವಸ್ಥಾನಕ್ಕೆ ಸಾಗಿಬಂತು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸಂತೋಷ ಕುವಾರ್ ಶೆಟ್ಟಿ, ಶೀನ ಪೂಜಾರಿ, ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ಕಾರ್ಯದರ್ಶಿ ಶೇಖರ ಪೂಜಾರಿ, ಕೋಶಾಧಿಕಾರಿ ಸುರೇಶ್ ಕುವಾರ್, ಪ್ರಧಾನ ಅರ್ಚಕ ಸಂಜೀವ ಬೇಳೂರು, ಗುರಿಕಾರ ಶಿವಕುಮ್ರಗೋಡು ಮತ್ತು ಇನ್ನಿತರ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.