

ಕುಂದಾಪುರ: ಸಂಸ್ಕೃತ ದೇವಭಾಷೆಯಾಗಿದೆ. ಎಲ್ಲ ಭಾಷೆಗಳ ಮೂಲ ಸಂಸ್ಕೃತವಾಗಿದ್ದು, ಸಂಸ್ಕೃತಿ ಉಳಿದಿರುವುದೂ ದೇವಭಾಷೆಯಿಂದ. ಈ ಭಾಷೆಯನ್ನು ಉಳಿಸಬೇಕಿರುವುದು ಸರ್ವರ ಕರ್ತವ್ಯ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಹೇಳಿದರು.
ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘದ ಆಶ್ರಯದಲ್ಲಿ ಆಯೋಜಿಸಿದ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಹಳೇ ವಿದ್ಯಾರ್ಥಿನಿ ಯು.ಸಂಗೀತಾ ಶೆಣೈ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಹತ್ವಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ.ಯಶವಂತಿ ಕೆ., ಉಪನ್ಯಾಸಕಿಯರಾದ ಗಾಯತ್ರಿ ಮತ್ತು ಸ್ವಸಿಶ್ರೀ ಹಾಗೂ ಗಣಿತ ವಿಭಾಗದ ಮುಖ್ಯಸ್ಥೆ ವೈಷ್ಣವಿ ಉಪಸ್ಥಿತರಿದ್ದರು.
ಎನ್.ಶ್ರೀಲತಾ ವಿ.ನಾಯಕ್ ಸ್ವಾಗತಿಸಿದರು. ಪಂಚಮಿ, ಪಲ್ಲವಿ, ಶ್ರೀಲತಾ ಹಾಗೂ ಸಿಂಚನಾ ಪ್ರಾರ್ಥಿಸಿದರು. ಅಧಿತಿ ಹೊಳ್ಳ, ಶ್ರದ್ಧಾ ಹಾಗೂ ಅನಘಾ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಧೃತಿ ಬಿ. ಗೌಡ ಕಾರ್ಯಕ್ರಮ ನಿರೂಪಿಸಿದರು.