ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳೇ ನೇರ ಹೊಣೆ

BYN-May16-1-Heranjalu Strike
Published on

ಬೈಂದೂರು: ಸಣ್ಣ ನೀರಾವರಿ ಇಲಾಖೆಯ ಯೋಜನೆಗಳು ಅನುಕೂಲವಾಗುವ ಬದಲು ಗುತ್ತಿಗೆದಾರರು ಮತ್ತು ಅಧಿಕಾರಿಗಳ ಹಿತಾಸಕ್ತಿಗೆ ಮೀಸಲಾಗಿವೆ. ಉಡುಪಿ ಜಿಲ್ಲೆಯಲ್ಲಿ 400 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ರೈತರು ಹೊರತುಪಡಿಸಿ ಉಳಿದವರೆಲ್ಲರೂ ಫಲಾನುಭವಿಗಳಾಗಿದ್ದಾರೆ. ರೈತರಿಗೆ ಅನ್ಯಾಯವಾದರೆ ಅಧಿಕಾರಿಗಳೇ ನೇರ ಹೊಣೆ ಎಂದು ಜಿಲ್ಲಾ ರೈತ ಸಂದ ಕಂಬದಕೋಣೆ ವಲಯಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಆರೋಪಿಸಿದರು.

ಹೇರಂಜಾಲು ಸೇರಿದಂತೆ ಪರಿಸರದ ಐದು ಗ್ರಾಮಗಳ ಸಂತ್ರಸ್ತ ರೈತರ ಬಹು ಬೇಡಿಕೆಯ ಗುಡೇ ದೇವಸ್ಥಾನ ಏತ ನೀರಾವರಿ ಕಾಮಗಾರಿ ಜಾಕ್‌ವೆಲ್ ಸ್ಥಳಾಂತರ ಆಗ್ರಹಿಸಿ ಶುಕ್ರವಾರ ಬೈಂದೂರು ಚಲೋ ಕಾರ್ಯಕ್ರಮ ಉದ್ದೇಶಿಸಿ ವಾತನಾಡಿದರು.

ಬೈಂದೂರು ರೈತ ಸಂಘ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುವಾರ್ ಶೆಟ್ಟಿ ವಾತನಾಡಿ, ಗೊಂದಲಗಳಿಂದ ಯಾವುದೇ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ರೈತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಸಮೀಕ್ಷೆ ನಡೆಸಿ, ಚರ್ಚೆಯ ಮೂಲಕ ಮುಂದಿನ ನಡೆಯ ಬಗ್ಗೆ ಯೋಚಿಸಬೇಕು ಎಂದರು.

ಭಿಕ್ಷೆ ಬೇಡಿ ಲಂಚ

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಲಂಚ ಪಡೆದು ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸ್ಥಳದಲ್ಲಿಯೇ ಭಿಕ್ಷೆ ಸಂಗ್ರಹಿಸಿ ತಹಸೀಲ್ದಾರರ ಮೂಲಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ಶ್ರೀ ಸೇನೇಶ್ವರ ದೇವಸ್ಥಾನದಿಂದ ಆಡಳಿತ ಸೌಧದವರೆಗೆ ಕಾಲ್ನಡಿಗೆ ಮೂಲಕ ತೆರಳಿ ತಹಸೀಲ್ದಾರ್ ಭೀಮಸೇನ ಕುಲಕರ್ಣಿಗೆ ಮನವಿ ಸಲ್ಲಿಸಲಾಯಿತು.

ಹೇರಂಜಾಲು ಒಕ್ಕೂಟ ಅಧ್ಯಕ್ಷೆ ಜಯಂತಿ ಐತಾಳ್, ಜಿಲ್ಲಾ ರೈತ ಸಂ ಪ್ರತಿನಿಧಿ ಉದಯ ಕುವಾರ್ ಶೆಟ್ಟಿ, ರಾವೇಂದ್ರ ಹೇರಂಜಾಲು, ವೇದನಾಥ ಹೇರಂಜಾಲು, ಕೃಷ್ಣ ಪೂಜಾರಿ, ಮಣಿರಾಜ್ ಹೇರಂಜಾಲು, ಕೃಷ್ಣ ಶುಕ್ರಾಸನಮನೆ, ಸುಬ್ರಹ್ಮಣ್ಯ, ರೈತ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net