

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತವು ಜಗತ್ತಿನ ನಾಲ್ಕನೇ ಬಲಿಷ್ಠವಾದ ಸೇನೆ ಹೊಂದಿದೆ. ಭಾರತೀಯ ಸೇನೆಯ ಸಾಮರ್ಥ್ಯ ಹೇಗಿದೆಯೆನ್ನುವುದು ಆಪರೇಷನ್ ಸಿಂಧೂರ ಜಗತ್ತಿಗೆ ತೋರ್ಪಡಿಸಿದೆ. ಯುದ್ಧ ಗೆಲ್ಲಲು ಸಮರ್ಥ ನಾಯಕತ್ವ, ಆಯುಧ ಹಾಗೂ ಯೋಧರು ಮುಖ್ಯವಾಗುತ್ತಾರೆ. ಇದೀಗ ಸಾಲದ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ, ಭಾರತ ಕೊಟ್ಟ ತಿರುಗೇಟಿಗೆ ತತ್ತರಿಸಿದೆ. ಮತ್ತೆ ದಾಳಿಯ ಹುಚ್ಚು ಸಾಹಸಕ್ಕೆ ಮುಂದಾದರೆ ಇತಿಹಾಸದಲ್ಲಿ ಮರೆಯಲಾಗದ ಪಾಠವನ್ನೇ ಅವರಿಗೆ ಕಲಿಸಬೇಕು ಎಂದು ನಿವೃತ್ತ ಯೋಧ ಸುರೇಶ ರಾವ್ ಹೇಳಿದರು.
ಮೆರವಣಿಗೆಯಲ್ಲಿ 30 ಅಡಿ ಉದ್ದದ ಮೂರು ತ್ರಿವರ್ಣ ಧ್ವಜ ಹಿಡಿದು ಸಾಗಿದರು. ಯಾತ್ರೆಯುದ್ದಕ್ಕೂ ಪುಷ್ಪ ನಮನ ಸಲ್ಲಿಸಲಾಯಿತು. ನೂರಾರು ಮಂದಿ ಸಣ್ಣ ಸಣ್ಣ ತ್ರಿವರ್ಣ ಧ್ವಜವನ್ನು ಹಿಡಿದು ಬೀಸುತ್ತ ವಂದೇ ಮಾತರಂ, ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಉಡುಪಿಯ ಶೋಕ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ಫಾ. ಪ್ರವೀಣ ಡಿಸೋಜಾ, ಕರ್ನಲ್ ಎಫ್.ಎ. ರೋಡ್ರಿಗ್ರೀಸ್, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಕನ್ಯಾ ಮೇರಿ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಮಾತನಾಡಿದರು.
ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.