ಹೊಸ ರಾಜಗೋಪುರಕ್ಕೆ ಶಿಲಾನ್ಯಾಸ

Bdk_Rajagopuram
Published on

ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ನೂತನ ರಾಜಗೋಪುರದ ಶಿಲಾನ್ಯಾಸ ಅ.18ರಂದು ಶ್ರೀ ಕ್ಷೇತ್ರದ ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ವಾರ್ಗದರ್ಶನದಲ್ಲಿ ಜರುಗಲಿದೆ.

ಬೆಳಗ್ಗೆ 9ಕ್ಕೆ ಸ್ವಾಮೀಜಿಗಳು, ತಂತ್ರಿ, ಅತಿಥಿಗಳಿಗೆ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತ, 9.30ಕ್ಕೆ ರಾಜಗೋಪುರದ ಶಿಲಾನ್ಯಾಸ ನಡೆಯಲಿದೆ. 10ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ತಂತ್ರಿಗಳಿಂದ ಆಶೀರ್ವಚನ ನೀಡಲಿರುವರು. ಉದ್ಯಮಿ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ ಉದ್ಘಾಟಿಸುವರು. ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಅಧ್ಯಕ್ಷತೆ ವಹಿಸುವರು.

ಗಣ್ಯರಾದ ಕೃಷ್ಣ ಭಟ್ ಮಂಜೇಶ್ವರ, ರವೀಶ್ ಭಟ್ ಕೀರ್ತೇಶ್ವರ, ರಾಜ ಬೆಳ್ಳಪ್ಪಾಡ, ಬೆದ್ರಡ್ಕ ರಮೇಶ್ ಕಾರಂತ ಶುಭ ಹಾರೈಸುವರು. ಪ್ರಮುಖರಾದ ಸತೀಶ್ ಉಚ್ಚಿಲ, ಗೋಪಾಲ ಶೆಟ್ಟಿ ಅರಿಬೈಲು, ವಿಶ್ವಾಸ್ ದಾಸ್, ಶಶಿಕಲಾ ಸುವರ್ಣ, ತುಕಾರಾಮ ಕುಂಬಳೆ, ವಿಶ್ವನಾಥ ಪೊಯ್ಯಕಂಡ, ದಯಾನಂದ ಬಂಗೇರ, ಯಶವಂತ ವಿಟ್ಲ ಭಾಗವಹಿಸುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net