ಎಸ್‌ಡಿಎಂನಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ

Bel_Handwash
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಆರೋಗ್ಯಕರ ಜೀವನಕ್ಕೆ ಕೈಯ ಸ್ವಚ್ಛತೆ ಅತಿಮುಖ್ಯ. ಇತ್ತೀಚಿನ ವರದಿ ಪ್ರಕಾರ ಕೈಯ ಅಸುರಕ್ಷತೆಯಿಂದ ಪ್ರತಿ ವರ್ಷ 3.5 ಮಿಲಿಯನ್ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಡಯೇರಿಯಾ ಹಾಗೂ ನ್ಯೂಮೆನಿಯಾದಂತಹ ಕಾಯಿಲೆಗಳು ಕೈ ತೊಳೆಯದೆ ಆಹಾರ ಸೇವಿಸುವುದರಿಂದ ಬರುತ್ತವೆ. ಈಗ ಕೊರೋನ ವೈರಸ್ ಕೂಡ ಸೇರ್ಪಡೆಯಾಗಿದೆ. ಕೈಯ ಅಸುರಕ್ಷತೆ ಬಗ್ಗೆ ಕಳವಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯು 2008ರಿಂದ ವಿಶ್ವ ಕೈ ತೊಳೆಯುವ ದಿನವನ್ನಾಗಿ ಘೋಷಿಸಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ ವಿಶ್ವ ಕೈ ತೊಳೆಯುವ ದಿನಾಚರಣೆ ಪ್ರಯುಕ್ತ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು. ಶ್ರೀಹರಿ ಹಾಗೂ ಗೌತಮಿ ಜಿ. ಪ್ರಾತ್ಯಕ್ಷಿಕೆಯಲ್ಲಿ ಭಾಗವಸಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.
ಘಟಕದ ನಾಯಕ ಆದಿತ್ಯ.ವಿ. ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net