

ವಿಜಯವಾಣಿ ಸುದ್ದಿಜಾಲ ಕೋಟ
ಯಕ್ಷಗಾನ ಕ್ಷೇತ್ರದಲ್ಲಿ ಹವ್ಯಾಸಿ ಯಕ್ಷ ಕಲಾವಿದರ ಪಾತ್ರ ಗಣನೀಯವಾದುದ್ದು ಎಂದು ನಾಡೋಜ ಡಾ.ಜಿ ಶಂಕರ್ ಹೇಳಿದರು. ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಯಕ್ಷ ಸೌರಭ ಪ್ರಶಸ್ತಿ ಹಾಗೂ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅವರಿಗೆ ದಶಮಾನೋತ್ಸವ ಯಕ್ಷ ಸುರಭಿ ಪ್ರಶಸ್ತಿ ಪ್ರದಾನಿಸಲಾಯಿತು. ವಿಶೇಷ ಪುರಸ್ಕಾರವನ್ನು ನಾಡೋಜ ಡಾ.ಜಿ ಶಂಕರ್ ಅವರಿಗೆ ಪ್ರದಾನಿಸಲಾಯಿತು.
ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಹವ್ಯಾಸಿ ಕಲಾವಿದರಾದ ಗೋಪಾಲಕೃಷ್ಣ ಪೈ, ಶಂಕರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ವಿವಿಧ ಯಕ್ಷಗಾನ ಸಂಘ, ಸಂಸ್ಥೆಗಳನ್ನು ಗೌರವಿಸಲಾಯಿತು.
ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಕೋಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಡಾ.ಕೆ.ಎಸ್ ಕಾರಂತ್, ಎಚ್.ಸುಜಯೀಂದ್ರ ಹಂದೆ, ಶಂಭು ಪೂಜಾರಿ ಕೋಡಿ, ರಾಜೇಶ್ ಗಾಣಿಗ ಅಚ್ಲಾಡಿ, ಮಂಜುನಾಥ ಗಿಳಿಯಾರು, ಭೋಜ ಪೂಜಾರಿ, ರಾಘವೇಂದ್ರ ಕಾಂಚನ್ ಬಾರಿಕೆರೆ ಉಪಸ್ಥಿತರಿದ್ದರು. ಶ್ರೀನಾಥ್ ಉರಾಳ ಸ್ವಾಗತಿಸಿದರು. ಹರೀಶ್ ಭಂಡಾರಿ ವಂದಿಸಿದರು. ಪ್ರಣುತ್ ಗಾಣಿಗ ನಿರೂಪಿಸಿದರು.