ಕುಂದಾಪುರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಂದಾಪುರ ತಾಲೂಕಿನ ಕಂಡ್ಲೂರು ಕಾವ್ರಾಡಿ ಗ್ರಾಮದ ಆರೋಪಿ ಮುಸೀನ್ ಸಾಹೇಬ್ (29) ಎಂಬಾತನನ್ನು ಗೋವಾದ ದಾಬೋಲಿಮ್ ಏರ್‌ಪೋರ್ಟ್‌ನಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮುಸೀನ್ ಸಾಹೇಬ್ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 2017ರಲ್ಲಿ ಷರತ್ತುಬದಧ ಜಾಮೀನು ಪಡೆದುಕೊಂಡಿದ್ದ. 2022 ನವೆಂಬರ್ 29ರ ನಂತರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈತನ ವಿರುದ್ಧ 13 ಸಲ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದ್ದುದ್ದರಿಂದ ಆರೋಪಿ ವಿರುದ್ಧ ಎಲ್.ಒ.ಸಿ. ತೆರೆಸಲಾಗಿತ್ತು. ಮುಸೀನ್ ಸಾಹೇಬ್ ಸೋಮವಾರ ಬೆಳಗಿನ ಜಾವ ಗೋವಾದ ದಾಬೋಲಿಮ್ ಏರ್‌ಪೋರ್ಟ್‌ಗೆ ಬರುವ ಮಾಹಿತಿ ಮೇರೆಗೆ ಗೋವಾಕ್ಕೆ ತೆರಳಿದ ಪೊಲೀಸರು ಮುಸೀನ್ ಸಾಹೇಬ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.