

ಕೊಕ್ಕರ್ಣೆ: ಬ್ರಹ್ಮಾವರ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.98 ಅಂಕಗಳಿಸಿ ವಿಶೇಷ ಸಾಧನೆಗೈದಿರುವ ಬ್ರಹ್ಮಾವರದ ಸಂತೆಕಟ್ಟೆ ಮೂಲ್ಕಿ ದರ್ಕಾಸ್ತು ನಿವಾಸಿ ಸುಧಾಕರ ನಾಯ್ಕ ಮತ್ತು ಉಷಾ ದಂಪತಿ ಪುತ್ರ ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿ ಸಂದೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಸಂಘದ ಗೌರವಾಧ್ಯಕ್ಷ ಉಮೇಶ್ ನಾಯ್ಕ ಚೇರ್ಕಾಡಿ ಮತ್ತು ಉಪಾಧ್ಯಕ್ಷ ಕೃಷ್ಣ ನಾಯ್ಕ ಕೋಟಂಬೈಲು ವಿದ್ಯಾಭ್ಯಾಸಕ್ಕೆ ನೆರವು ಬೇಕಾದಲ್ಲಿ ಸಂಘವನ್ನು ಸಂಪರ್ಕಿಸುವಂತೆ ತಿಳಿಸಿದರು. ಅಧ್ಯಕ್ಷ ಮಹೇಂದ್ರ ನಾಯ್ಕ, ಗೌರವ ಸಲಹೆಗಾರ ಅಣ್ಣಯ್ಯ ನಾಯ್ಕ ಉಪ್ಪೂರು, ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟಂಬೈಲು, ಜೊತೆ ಕಾರ್ಯದರ್ಶಿ ನಾಗೇಶ್ ನಾಯ್ಕ ಸಂತೆಕಟ್ಟೆ, ಕೋಶಾಧಿಕಾರಿ ರವೀಂದ್ರ ನಾಯ್ಕ ಚಾಂತಾರು, ಸಹಕೋಶಾಧಿಕಾರಿ ಅಣ್ಣಪ್ಪ ನಾಯ್ಕ ಕೂಡ್ಲಿ, ಸಂಘಟನಾ ಕಾರ್ಯದರ್ಶಿಗಳಾದ ಶಂಕರ್ ನಾಯ್ಕ ಸಂತೆಕಟ್ಟೆ, ಭುವನೇಶ್ ನಾಯ್ಕ ಕರ್ಜೆ, ರಾಮಚಂದ್ರ ನಾಯ್ಕ ಸಂತೆಕಟ್ಟೆ, ಉಮೇಶ್ ನಾಯ್ಕ ಮಡಿ, ಸ್ಥಳೀಯ ಪ್ರಮುಖರಾದ ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.