

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಕಾಲೋನಿ ಸಮೀಪ ರೇಂಜ್ ಅಫೀಸ್ ಬಳಿ ಕಾರು ಗುದ್ದಿ ಕರೆಂಟ್ ಕಂಬ ಮುರಿದು ಬಿದ್ದ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಯಾತ್ರಿಕರು ಬಂದ ಕಾರು ಇದಾಗಿದು,್ದ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದರು. ಅತಿ ವೇಗವಾಗಿ ಬಂದ ಕಾರು ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಂಯತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಕುಲ್ಕುಂದದಲ್ಲಿ ರಾಜ್ಯ ಹೆದ್ದಾರಿ ಸಮೀಪ ಅಳವಡಿಸಿದ್ದ ಎಚ್ಚರಿಕೆ ಫಲಕದ ಬಳಿಯೇ ಅಪಘಾತ ನಡೆದಿದೆ.