ಯಕ್ಷಗಾನ ಅದ್ಭುತ ಕಲೆಎಕ್ಕಾರು ಯಕ್ಷ ಶಿಕ್ಷಣ ಕಾರ್ಯಕ್ರಮದಲ್ಲಿ ಗಿರೀಶ್ ಶೆಟ್ಟಿ ಕಟೀಲು

mng--16 June Ekkar yaksha shikshana
Published on

ಮಂಗಳೂರು: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನದಲ್ಲಿ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಯಕ್ಷಗಾನ ಸಮಾಜ ಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಅದ್ಬುತ ಕಲೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಕಟೀಲು -ಎಕ್ಕಾರು ಘಟಕದ ಆಧ್ಯಕ್ಷ ಗಿರೀಶ್ ಎಂ ಶೆಟ್ಟಿ ಕಟೀಲು ಅಭಿಪ್ರಾಯ ಪಟ್ಟರು.


ಸರ್ಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಶನಿವಾರ ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರ್ ಉದ್ಘಾಟಿಸಿದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು. ಸುದೀಪ್ ಅಮೀನ್ , ಎಕ್ಕಾರು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ, ನಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತೇಶ ಶೆಟ್ಟಿ , ಗ್ರಾ.ಪಂ. ಸದಸ್ಯ ವಿಕ್ರಮ್ ಮಾಡ, ಮುಖ್ಯ ಶಿಕ್ಷಕಿ ಇಂದಿರಾ ಎನ್. ರಾವ್, ನೋಡಲ್ ಶಿಕ್ಷಕರಾದ ಡಾ.ಅನಿತ್ ಕುಮಾರ್ ಉಪಸ್ಥಿತರಿದ್ದರು.


ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಘಟಕದ ಸಂಚಾಲಕರಾದ ನಿತೇಶ್ ಎಕ್ಕಾರು ವಂದಿಸಿದರು. ಶಿಕ್ಷಕಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು, ಯಕ್ಷ ಶಿಕ್ಷಕರಾದ ರಾಮ್ ಪ್ರಕಾಶ್ ಕಲ್ಲೂರಾಯ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹೆಜ್ಜೆಗಳನ್ನ ಕಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಹಿರಿಯ ಶಿಕ್ಷಕರಾದ ಪೂರ್ಣಿಮಾ ಎಂ, ರಾಜಶ್ರೀ ಕೆ, ವಿದ್ಯಾಲತಾ, ವಿದ್ಯಾ ಗೌರಿ, ರಮ್ಯಾ, ಜಯಂತಿ, ನಿಶ್ಮಿತಾ ಹಾಗೂ ಪೋಷಕರು ಉಪಸ್ಥಿತರಿದ್ದರು.


ದಕ್ಷಿಣ ಭಾರತ ವಲಯ ಮಟ್ಟದ ಕೋ ಕೋ ಪಂದ್ಯಾಟವು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾ ನಿಲಯ ವಿಜಯವಾಡ ಆಂಧ್ರಪ್ರದೇಶ ಇಲ್ಲಿ ನಡೆಯಲಿದ್ದು, ಕೋಕೋ ಪಂದ್ಯಾಟದಲ್ಲಿ ಪಾಲ್ಗೊಳ್ಳುವ 8 ಮಂದಿ ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಇವರಿಗೆ ಶುಭ ಹಾರೈಸಲಾಯಿತು. 130 ಮಂದಿ ಯಕ್ಷ ಶಿಕ್ಷಣದಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net