

ಕೊಕ್ಕರ್ಣೆ: ಹೊಸೂರು ಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಂಜೂರು ನಾಯಕರ ಮನೆಯ ಮಹೇಶ್ ಶೆಟ್ಟಿ ಅವರು ನೀಡಿದ ಪ್ರಿಂಟರ್ ಹಸ್ತಾಂತರ ಮತ್ತು ಮನೋಹರ ಶೆಟ್ಟಿ ನೀಡಿದ ನೋಟ್ ಪುಸ್ತಕ ಹಾಗೂ ಸರ್ಕಾರ ನೀಡಿದ ಉಚಿತ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿತು.
ಗೌರವ ಶಿಕ್ಷಕಿಯರ ಸಂಭಾವನೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಅಶೋಕ ಶೆಟ್ಟಿ ಮೈರ್ವಾಡಿ, ಸುರೇಶ್ ಶೆಟ್ಟಿ, ರವೀಂದ್ರ ಕ್ರಮಧಾರಿ, ತೇಜಸ್ ಅವರನ್ನು ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಇನಕರ ಶೆಟ್ಟಿ, ಸ್ಥಳೀಯರಾದ ನಿವೃತ್ತ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ, ರೇವತಿ ವಿ.ಶೆಟ್ಟಿ, ಜಯಕರ ಶೆಟ್ಟಿ ಮೈರ್ವಾಡಿ, ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸುಮಾ ಕ್ರಮಧಾರಿ ವಂದಿಸಿದರು. ಉಷಾ ಕೆ. ನಿರೂಪಿಸಿದರು. ಗೌರವ ಶಿಕ್ಷಕಿಯರಾದ ರಮ್ಯಾ ಶೆಟ್ಟಿ, ಸ್ವಪ್ನಾ ಕೆ.ವಿ. ಸಹಕರಿಸಿದರು.