ಸಾಮಾನ್ಯ ಜ್ಞಾನದ ಕೊರತೆ: ಉಪನ್ಯಾಸಕ ದಿನೇಶ್ ಬಿ.ಕೆ ಬಳಂಜ ವಿಷಾದ

st.antony
ಸಂತ ಅಂತೋನಿ ಕಾಲೇಜಿನ ಪ್ರಾಂಶುಪಾಲ ಡಾ.ಆಲ್ವಿನ್ ಸೆರಾವೊ ಕಾರ್ಯಕ್ರಮ ಉದ್ಘಾಟಿಸಿದರು. ದಿನೇಶ್ ಬಿ.ಕೆ ಬಳಂಜ, ರಿಚರ್ಡ್ ಮೋರಸ್ ಮೊದಲಾದವರಿದ್ದರು.
Published on

ಬೆಳ್ತಂಗಡಿ: ನವ ಮಾಧ್ಯಮಗಳು ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವ ಬದಲು ವ್ಯಸನಿಗಳನ್ನಾಗಿ ಮಾಡುತ್ತಿವೆ. ಸಾಮಾನ್ಯ ಜ್ಞಾನದ ಕೊರತೆ ಅವರನ್ನು ಕಾಡುತ್ತಿದೆ. ಪುಸ್ತಕ ಓದುವ ಸಂಸ್ಕೃತಿ ಬೆಳೆಸುವುದರಿಂದ ಈ ಕೊರತೆ ನೀಗಿಸಬಹುದು ಎಂದು ಕನ್ನಡ ಉಪನ್ಯಾಸಕ ದಿನೇಶ್ ಬಿ.ಕೆ ಬಳಂಜ ಹೇಳಿದರು.

ನಾರಾವಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ-ಪಾಲಕರ ಸಭೆಯಲ್ಲಿ ಮಾತನಾಡಿದರು.

ಪ್ರಾಂಶುಪಾಲ ಡಾ.ಆಲ್ವಿನ್ ಸೆರಾವೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರ ಮೇಲೆಯೂ ಇದೆ. ಶಿಕ್ಷಕ-ಪಾಲಕರು ಸೇರಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ರಿಚರ್ಡ್ ಮೋರಸ್, ಗಣಿತಶಾಸ್ತ್ರ ಉಪನ್ಯಾಸಕ ಸಂತೋಷ್ ಸಲ್ಡಾನ ಕಾರ್ಯಕ್ರಮ ಸಂಯೋಜಕಿ ಅನಿತಾ ಡಿಸೋಜ ಉಪಸ್ಥಿತರಿದ್ದರು.

ರಿಚರ್ಡ್ ಮೋರಸ್ ಸ್ವಾಗತಿಸಿದರು. ಸಂತೋಷ್ ಸಲ್ಡಾನ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net