ಮನೆಗೆ ಮರ ಬಿದ್ದು ಹಾನಿ

house
ನೇರಂಬೊಳು ನಿವಾಸಿ ಚಂದ್ರಾವತಿ ವಿಠಲ ಪೂಜಾರಿ ಮನೆಯ ಬದಿಯಲ್ಲಿ ಆಳವಾದ ಕಂದಕವಿದ್ದು ಮಣ್ಣು ಕುಸಿದು ಬಿದ್ದಿದೆ
Published on

ಬಂಟ್ವಾಳ: ನಿರಂತರ ಮಳೆಗೆ ಬಂಟ್ವಾಳ ಕಸ್ಬಾ ಗ್ರಾಮದ ನೇರಂಬೊಳು ನಿವಾಸಿ ಚಂದ್ರಾವತಿ ವಿಠಲ ಪೂಜಾರಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ. ಮನೆಯ ಬದಿಯಲ್ಲಿ ಆಳವಾದ ಕಂದಕವಿದ್ದು ಮಣ್ಣು ಕುಸಿದು ಮನೆ ಅಪಾಯಕ್ಕೆ ಸಿಲುಕಿದೆ. ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಗೋಳ್ತಮಜಲು ಗ್ರಾಮದ ಉಮೆಶ್ ನಾಯ್ಕ ಎಂಬುವರ ಮನೆಯ ಮೇಲ್ಭಾಗದ ಮನೆ ಬೀಳುವ ಅಪಾಯ ಎದುರಾಗಿದ್ದು ಕುಟುಂಬಕ್ಕೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಗೋಳ್ತಮಜಲು ಗ್ರಾಮದ ಮೀನಾಕ್ಷಿ ಈಶ್ವರ ಭಂಡಾರಿಯವರ ಮನೆಬದಿಯ ಧರೆ ಕುಸಿದಿದ್ದು ಅಪಾಯದ ಹಿನ್ನೆಲೆಯಲ್ಲಿ ಮನೆಮಂದಿಯನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net