ಮಳೆಯಿಂದ ಕೆರೆ ತುಂಬಿ ರಸ್ತೆ ಮುಳುಗಡೆ : ಮನೆಯಿಂದ ಹೊರ ಹೋಗಲು ಪರದಾಡುತ್ತಿರುವ ಕುಟುಂಬ

water
ಸಂಪರ್ಕ ರಸ್ತೆಯಲ್ಲಿ ಕೆರೆ ನೀರು ತುಂಬಿರುವುದು
Published on

ಕಡಬ: ಕುಟ್ರುಪಾಡಿ ಗ್ರಾಮದ ವ್ಯಾಪ್ತಿಗೆ ಬರುವ ಕಡಬ ಪೇಟೆ ಸಮೀಪದ ಹಳೇಸ್ಟೇಷನ್ ಎಂಬಲ್ಲಿನ ಕೆರೆಯಲ್ಲಿ ನೀರು ತುಂಬಿದ ಪರಿಣಾಮ ಕೆರೆ ಸಮೀಪ ಇರುವ ಕುಟುಂಬವೊಂದರ ಸಂಪರ್ಕ ರಸ್ತೆಗೆ ನೆರೆ ನೀರು ಆವೃತವಾಗಿ ಬಾಹ್ಯ ಸಂಪರ್ಕ ಕಡಿತಗೊಂಡಿದೆ.

ಕೆಲವು ದಿನಗಳಿಂದ ನಿರಂತರ ಮಳೆಯಿಂದ ಕೆರೆಯಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಹಳೆಸ್ಟೇಷನ್ ನಿವಾಸಿ ಪೊಡಿಯ ಎಂಬುವರ ಕುಟುಂಬ ಸಮಸ್ಯೆಗೆ ಸಿಲುಕಿದೆ. ಹೆಚ್ಚಿನ ಮಳೆಯಾದಾಗ ಮನೆಗೆ ನೀರು ನುಗ್ಗುವ ಸಂಭವವೂ ಇದೆ. ಈ ಮನೆಯಿಂದ ದಿನನಿತ್ಯ ಮಕ್ಕಳು ಶಾಲೆಗೆ ತೆರಳುತ್ತಿದ್ದು, ಮುಳುಗಿರುವ ರಸ್ತೆಯಲ್ಲಿ ದಾಟಿ ಅಪಾಯಕ್ಕೊಡ್ಡಿ ಮುಂದುವರಿಯುತ್ತಿದ್ದಾರೆ.

ಈ ಕೆರೆಯಿಂದ ಮೋರಿ ಹಾಕಿ ನೀರನ್ನು ಹೊರಗಡೆ ಬಿಡಲಾಗುತ್ತಿದ್ದರೂ ಸರಾವಾಗಿ ನೀರು ಹೋಗದೆ ಇರುವುದರಿಂದ ದೊಡ್ಡಮಟ್ಟದ ನೀರು ಸಂಗ್ರಹವಾಗಿರುವುದು ಸಮಸ್ಯೆ ಉದ್ಭವಕ್ಕೆ ಕಾರಣ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ತಕ್ಷಣ ಸ್ಥಳಕ್ಕೆ ಗ್ರಾಮಧಿಕಾರಿಯನ್ನು ಕಳುಹಿಸಿ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net