

ಕಾಸರಗೋಡು: ಮಿತಿಮೀರಿದ ಪ್ರಮಾಣದಲ್ಲಿ ಬಿಪಿ ಹಾಗೂ ಶುಗರ್ ಮಾತ್ರೆ ಸೇವಿಸಿದ ಪರಿಣಾಮ ಎಡನೀರು ನಿವಾಸಿ ದಿ.ನಾರಾಯಣ ಎಂಬುವರ ಪತ್ನಿ ಲಕ್ಷ್ಮೀ(49)ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಲಕ್ಷ್ಮೀ ಅವರ ಪತಿ ನಾರಾಯಣ ಅವರು ವರ್ಷದ ಹಿಂದೆ ಅಸೌಖ್ಯದಿಂದ ಮೃತಪಟ್ಟಿದ್ದು, ನಂತರ ಲಕ್ಷ್ಮೀ ಖಿನ್ನತೆಗೊಳಗಾಗಿದ್ದರು.
ಕೂಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಬುಧವಾರ ಮನೆಯಲ್ಲಿ ಅಸೌಖ್ಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಿದಾಗ ಬಿಪಿ, ಶುಗರ್ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದು ಪತ್ತೆಯಾಗಿತ್ತು. ಉನ್ನತ ಚಿಕಿತ್ಸೆಗಾಗಿ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿರಲಿಲ್ಲ.