

ಆತ್ಮಹತ್ಯೆ ತಡೆಗಟ್ಟುವಿಕೆ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಆನ್ವಯ ಭಾರತದಲ್ಲಿ 2022ರ ನವೆಂಬರ್ 21ರಂದು ಸರ್ಕಾರ 2020-30ರ ವೇಳೆಗೆ ಆತ್ಮಹತ್ಯೆ ಪ್ರಮಾಣವನ್ನು ಶೇ. 12ರಿಂದ 10ಕ್ಕೆ ಇಳಿಸಲು ನೀತಿ ರೂಪಿಸಿದೆ.
* ಆಪ್ತಸಮಾಲೋಚನೆಗೆ ಸಂಪನ್ಮೂಲ ಸೃಷ್ಟಿಸುವುದು.
* ವೈದ್ಯರಿಗೆ, ಸ್ವಯಂ ಸೇವಕರಿಗೆ ತರಬೇತಿ ನೀಡಿ ಅವರ ಮೂಲಕ ಜಾಗೃತಿ ಮೂಡಿಸುವುದು.
* ಟೆಲಿಮನಸ್ ಸಹಾಯವಾಣಿ ಮೂಲಕ ಆಪ್ತಸಮಾಲೋಚನೆ ಮಾಡಿ ಸಲಹೆ ನೀಡುವುದು.
* ಸಾಮಾಜಿಕ ಆರೋಗ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ತಡೆಗೆ ಆದ್ಯತೆ ನೀಡುವುದು.
* ಆತ್ಮಹತ್ಯೆಯ ವಿಧಾನಗಳ ವೈಭವೀಕರಣ ಮಾಡದಂತೆ ಹಾಗೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವುದನ್ನು ತಪ್ಪಿಸಲು (ಪಾಲಿಡಾಲ್ ಸುಲಭದಲ್ಲಿ ಲಭ್ಯವಾಗದಂತೆ ಕ್ರಮ)ಕ್ರಮ.
* ವ್ಯಕ್ತಿಯ ನಡವಳಿಕೆಯಲ್ಲಾಗುವ ಬದಲಾವಣೆ ಗಮನಿಸಿ ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸುವುದು ಇತ್ಯಾದಿ.
* ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆಯುತ್ತಿರಿ.
* ವಯೋವೃದ್ಧರ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
* ಕೀಳರಿಮೆಯಿಂದ ಬಳಲುವುದನ್ನು ಗಂಭೀರವಾಗಿ ಪರಿಗಣಿಸಿ.
* ಕುಟುಂಬದ ಸದಸ್ಯರಿಗಾಗಿ ಸಮಯ ಮೀಸಲಿಡಿ.
* ಆತ್ಮಹತ್ಯೆ ಪ್ರಯತ್ನ ಹಾಗೂ ಬೆದರಿಕೆ ನಿರ್ಲಕ್ಷಿಸಬೇಡಿ.
* ವರ್ತನೆಯಲ್ಲಿ ಬದಲಾವಣೆಯಾದರೆ ತಜ್ಞರನ್ನು ಸಂಪರ್ಕಿಸಿ