ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

verabadra
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
Published on

ಬ್ರಹ್ಮಾವರ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ದೇವಸ್ಥಾನ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೆರೆ ಶ್ರೀನಿವಾಸ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಜಯರಾಮ್ ಶೆಟ್ಟಿಗಾರ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಎಸ್‌ಎಸ್‌ಎಲ್‌ಸಿ ಸಾಧಕರಾದ ನಿರೀಕ್ಷಾ ಕುಂದಾಪುರ, ಪ್ರಜ್ಞಾ, ಸಂಜನಾ, ಧನುಷ್, ಸಮರ್ಥ, ಪ್ರಶ್ಮಾ, ವಿಶ್ರಾಂತ್, ಅನ್ವಿತಾ, ಪಂಕಜ, ನಿರೀಕ್ಷಾ ಬಳ್ಳನೆ, ಮೇನಾ, ದೀಕ್ಷಿತ್, ಭವಿಷ್, ವೇದಿಕಾ, ದ್ವಿತೀಯ ಪಿಯುಸಿಯ ಸ್ಮಿತಾ, ಶಶಾಂಕ, ತರುಣ್, ಪವನ, ಡಯಾನ, ಭೂಷಣ್, ಉಜ್ವಲ್, ಪ್ರಜ್ವಲ್, ಮೇಶ್ಯಾಮ, ಸ್ವಸ್ತಿಕ್, ಸಾಕ್ಷಿ, ಪ್ರತೀಕ್, ಮನಿಷ್, ಪಂಚಮಿ, ಅದಿತ್, ಸಂಜನಾ, ಶರಧಿ, ಸಾತ್ವಿಕ್ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪೂರ್ಣಿವಾ ಮತ್ತು ಭಾಸ್ಕರ ಶೆಟ್ಟಿಗಾರ್ ಅಸೋಡು ಇವರನ್ನು ಗೌರವಿಸಲಾಯಿತು.

ವೀರೇಶ್ವರ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಾವತಿ ಸದಾಶಿವ ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ, ಕಾರ್ಯದರ್ಶಿ ಜನಾರ್ದನ್ ಶೆಟ್ಟಿಗಾರ, ನಾರಾಯಣ ಶೆಟ್ಟಿಗಾರ್, ಸಂಟನಾ ಸಮಿತಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್, ಸುಧಾಕರ ವಕ್ವಾಡಿ ಹಾಗೂ ಸಹ ಮೊಕ್ತೇಸರರು, ವಾಗಣೆ ಗುರಿಕಾರರು, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭಾಸ್ಕರ್ ಶೆಟ್ಟಿಗಾರ ವರದಿ ವಾಚಿಸಿದರು. ಡಾ.ಶಿವಪ್ರಸಾದ್ ಶೆಟ್ಟಿಗಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net