ಈಜು ಸ್ಪರ್ಧೆಯಲ್ಲಿ ವೆಂಕಟರಮಣ ಕಾಲೇಜಿಗೆ ಪದಕ

swimming
ಈಜು ಸ್ಪರ್ಧೆಯಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ, ಉಪಪ್ರಾಂಶುಪಾಲ ಸುಜಯ್ ಕೋಟೆಗಾರ್ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ರಾಘವೇಂದ್ರ ಗಾಣಿಗ
Published on

ಗಂಗೊಳ್ಳಿ: ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಂಜಿಎಂ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಮಣಿಪಾಲದ ಮರೀನಾ ಈಜುಕೊಳದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್‌ಗೆ 1 ಚಿನ್ನ ಮತ್ತು 1 ಬೆಳ್ಳಿ ಪದಕ, ಅಶ್ವಿನ್‌ಗೆ 1 ಚಿನ್ನ, 1ಬೆಳ್ಳಿ ಪದಕ, ಪ್ರಥಮ ಸಂಜನಾಗೆ 2 ಬೆಳ್ಳಿ ಪದಕ, ನಿಶಾಂತ್ ಖಾರ್ವಿ 1 ಬೆಳ್ಳಿ, ನಿಶ್ಚಿತ್ ಖಾರ್ವಿ 1 ಬೆಳ್ಳಿ ಪದಕ, ಸುಯೋಗ್ 1 ಬೆಳ್ಳಿ ಪದಕ ದೊರೆತಿದೆ. ಪದಕ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ, ಬೋಧಕ ಹಾಗೂ ಬೋಧಕೇತರರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net