

ಕುಂದಾಪುರ: ತಾನು ಕಾಲೇಜಿನಲ್ಲಿ ಕಲಿಯುವಾಗ ಗಳಿಸಿದ ಸ್ಕಾಲರ್ಶಿಪ್ ಹಣ ಉಳಿಕೆ ಮಾಡಿ ತನ್ನ ಹುಟ್ಟುಹಬ್ಬದಂದು ಅಂಪಾರು ಮೂಡುಬಗೆಯಲ್ಲಿರುವ ವಾಗ್ಜೊೃೀತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಗೆ ವಿದ್ಯಾರ್ಥಿನಿಯೊಬ್ಬರು ಉಪಕರಣ ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.
ಇಂಜಿನಿಯರ್ ಪ್ರಶಾಂತ್ ಮೊಳಹಳ್ಳಿ, ವೈದ್ಯೆ ಡಾ.ರಾಜೇಶ್ವರಿ ಅವರ ಪುತ್ರಿ ರೋಶನಿ ಎಂ.ಪಿ. ಆ.29ರಂದು ಜನ್ಮದಿನದ ಪ್ರಯುಕ್ತ ವಾಗ್ಜೊೃೀತಿ ವಸತಿ ಶಾಲೆಗೆ 50 ಸಾವಿರ ಮೌಲ್ಯದ ಸಮೂಹ ಶ್ರವಣ ಯಂತ್ರ ಕೊಡುಗೆಯಾಗಿ ನೀಡಿದ್ದಾರೆ. ಇವರು ಉಡುಪಿ ಜ್ಞ್ಞಾನಸುಧಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಈ ಬಾರಿ ಪಿಸಿಎಂಬಿ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದರು.
ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಉಪಕರಣ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ರವೀಂದ್ರ ಎಚ್. ಸ್ವೀಕರಿಸಿದರು. ವಿದ್ಯಾರ್ಥಿನಿ ಪಾಲಕರಾದ ಪ್ರಶಾಂತ್ ಮೊಳಹಳ್ಳಿ, ಡಾ.ರಾಜೇಶ್ವರಿ, ನಿರ್ಮಲಾ, ಮೊಳಹಳ್ಳಿ- ಹುಣ್ಸೆಮಕ್ಕಿ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಸ್.ಮೋಹನದಾಸ್ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಕೋಶಾಧಿಕಾರಿ ದಯಾನಂದ ಎಂ., ಸದಸ್ಯರಾದ ಎಸ್.ರತ್ನಾಕರ ಶೆಟ್ಟಿ, ಅನಿಲಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ, ಶಂಭುಶಂಕರ್ ಶೆಟ್ಟಿ ಮೊಳಹಳ್ಳಿ, ಸ್ಥಳೀಯರಾದ ವಸಂತಿ ಎಂ.ಶೆಟ್ಟಿ ಮೊಳಹಳ್ಳಿ, ಆಡಳಿತಾಧಿಕಾರಿ ತ್ರಿವೇಣಿ, ಶಿಕ್ಷಕಿಯರಾದ ಸತ್ಯಪ್ರಸನ್ನ, ರಾಜೇಶ್ವರಿ, ಪ್ರಮಿಳಾ, ರೆಜಿನಾ, ಶೈಲಾ ನಾಯಕ್, ಶ್ರೀಕಲಾ, ವಾರ್ಡನ್ ರಾಧಿಕಾ ಭಂಡಾರಿ, ಸಿಬ್ಬಂದಿ ಮಂಚಲಾ, ಸವಿತಾ ಇದ್ದರು.