

ಹೆಬ್ರಿ: ದಿನನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ಬರಹದ ಹವ್ಯಾಸಗಳು ಪ್ರಾರಂಭಗೊಳ್ಳುತ್ತದೆ. ಇದರಿಂದ ಮುಂದೆ ಪತ್ರಿಕೋದ್ಯಮದ ಅಭಿರುಚಿ ಬೆಳೆಯುತ್ತದೆ ಎಂದು ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.
ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲು, ಪ್ರಾಥಮಿಕ ವಿಭಾಗದ ಸಭಾಂಗಣದಲ್ಲಿ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ವಿಷಯವಾರು ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಮಾಡಿ ಮಾತನಾಡಿದರು. ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮಹೇಶ ಹೈಕಾಡಿ ನಿರೂಪಿಸಿದರು. ಕೃತಿ ವಂದಿಸಿದರು.