ಬೆಂಗಳೂರಿನ ಬಸವನಗುಡಿ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸ್ವಯಂವರ ಪಾರ್ವತಿ ಯಾಗ

Yaga
ಬಸವನಗುಡಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ.
Published on

ಬೆಂಗಳೂರು: ಬಸವನಗುಡಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ (ಜೂ.12) ವಿಜಯವಾಣಿ ಮತ್ತು ದಿಗ್ವಿಜಯ 24*7ನ್ಯೂಸ್ ಹಾಗೂ ಕನ್ನಡ ಮ್ಯಾಟ್ರಿಮೊನಿ ಸಹಯೋಗದಲ್ಲಿ ‘ಸ್ವಯಂವರ ಪಾರ್ವತಿ ಯಾಗ’ ಆಯೋಜಿಸಲಾಗಿದೆ.

ಕಂಕಣ ಭಾಗ್ಯ ಕೂಡಿಬಾರದ ವಧು-ವರರು ಯಾಗದಲ್ಲಿ ಪಾಲ್ಗೊಂಡರೆ ವಿವಾಹ ಯೋಗ ಲಭಿಸಲಿದೆ. ಬೆಳಗ್ಗೆ 9 ಗಂಟೆಗೆ ಯಾಗ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಂಡವರಿಗೆ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸುವುದು ತಪ್ಪಲಿದ್ದು, ವಿವಾಹ ತೊಡಕುಗಳು ನಿವಾರಣೆಯಾಗಿ ವಧು- ವರರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಯಾಗದಲ್ಲಿ ಭಾಗಿಯಾಗುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಯಾಗದಿಂದ ಕಂಕಣಬಲ: ಯಾಗದಲ್ಲಿ ಪಾಲ್ಗೊಳ್ಳುವ ಭಾವಿ ವಧು ಮತ್ತು ವರರಿಗೆ 48 ದಿನಗಳಲ್ಲಿ ಕಂಕಣ ಭಾಗ್ಯ ಕೂಡಿಬರುತ್ತದೆ. ಪುರಾಣಗಳ ಪ್ರಕಾರ, ಪಾರ್ವತಿ ವಿವಾಹ ಸರಳ ಪ್ರಕ್ರಿಯೆ ಆಗಿರಲಿಲ್ಲ. ಈ ಕಾರಣಕ್ಕಾಗಿ ಸ್ವಯಂವರ ಮಂತ್ರ ಉಪದೇಶಿಸಲಾಗುವ ಶಿವ- ಪಾರ್ವತಿ ಯಾಗ ಮಹತ್ವ ಪಡೆದಿದೆ. ಪೂರ್ವಜನ್ಮದ ದೋಷಗಳಿಂದಲೂ ಮದುವೆ ವಿಳಂಬ ಆಗುತ್ತಿರುತ್ತದೆ. ಯಾಗ ಮಾಡಿದರೆ ದೋಷ ಪರಿಹಾರ ಆಗುತ್ತದೆ. ಭಾವಿ ವಧು-ವರರು ಮಾತ್ರವಲ್ಲ, ಸಂಸಾರದಲ್ಲಿ ನೆಮ್ಮದಿ ಇಲ್ಲದವರೂ ಯಾಗ ಮಾಡಬಹುದು. ಇದರಿಂದಾಗಿ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

ಸ್ಥಳ: ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಬಸವನಗುಡಿ, ಬೆಂಗಳೂರು- 560004 ಮಾಸ್ಕ್ ಕಡ್ಡಾಯ: ಕರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಯಂವರದಲ್ಲಿ ಭಾಗವಹಿಸುವವರು ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು. ವ್ಯಕ್ತಿಗತ ಅಂತರವನ್ನು ಕಾಪಾಡಬೇಕು.
ಜಾತಕ, ಮ್ಯಾಟ್ರಿ ಐಡಿ ಮರೆಯದೆ ತನ್ನಿ

ಸ್ವಯಂವರ ಪಾರ್ವತಿ ಯಾಗದಿಂದ ಜೀವನ ಸಂಗಾತಿ ಶೀಘ್ರ ದೊರಕಲು ಅನುವಾಗುತ್ತದೆ. ಯಾಗದಲ್ಲಿ ಪಾಲ್ಗೊಳ್ಳುವ ಭಾವಿ ವಧು-ವರರು ತಮ್ಮ ಭಾವಚಿತ್ರದೊಂದಿಗೆ ಜಾತಕವನ್ನು ತರುವಂತೆ ಕೋರಲಾಗಿದೆ. https://bit.ly/3MZlw2B ಯಲ್ಲಿ ಹೆಸರು ನೋಂದಾಯಿಸಿ. ಉಚಿತ ಹಾಗೂ ವಿಶೇಷ ಪೂಜೆ, ಸಂಕಲ್ಪ ಮತ್ತು ಪ್ರಸಾದಕ್ಕಾಗಿ ಮ್ಯಾಟ್ರಿ ಐಡಿಯನ್ನು ತೋರಿಸಬೇಕು. ವಿವರಗಳಿಗೆ ದೂರವಾಣಿ ಸಂಖ್ಯೆ 75388 06555 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net