More

    ಅಡ್ಡ ಮತದಾನ ಮಾಡಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್​

    ನವದೆಹಲಿ: ರಾಜ್ಯಸಭೆಗೆ ನಡೆದ ಈ ಸಲದ ಚುನಾವಣೆಯಲ್ಲಿ ಕೆಲವೆಡೆ ಅಡ್ಡ ಮತದಾನದ ಚಲಾವಣೆ ಆಗಿದ್ದು, ಅದೇ ಈಗ ಶಾಸಕರೊಬ್ಬರಿಗೆ ಕುತ್ತಾಗಿದ್ದು, ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಕಾಂಗ್ರೆಸ್​ ಈ ಮೂಲಕ ಅಡ್ಡ ಮತದಾನದ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿದೆ.

    ಹರಿಯಾಣದ ಅದಂಪುರ ಕ್ಷೇತ್ರದ ಶಾಸಕ ಕುಲದೀಪ್ ಬಿಷ್ಣೊಯ್​ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಸೇರಿದಂತೆ ಪಕ್ಷದ ಎಲ್ಲ ಸ್ಥಾನಗಳಿಂದಲೂ ಉಚ್ಚಾಟನೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

    ಹರಿಯಾಣದಲ್ಲಿ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣನ್​ ಪನ್ವಾರ್ ಜಯ ಗಳಿಸಿದ್ದರು. ಈ ಕುರಿತು ಮಾಹಿತಿ ನೀಡುವಾಗ ಅಲ್ಲಿನ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಅಡ್ಡ ಮತದಾನದ ಕುರಿತು ಪ್ರಸ್ತಾಪಿಸಿದ್ದರು. ಕುಲದೀಪ್ ಆತ್ಮಸಾಕ್ಷಿ ಪ್ರಕಾರ ಬಿಜೆಪಿಗೆ ಮತ ಚಲಾಯಿಸಿದ್ದು, ಕಾಂಗ್ರೆಸ್​ನ ಅಜಯ್ ಮಾಕೆನ್ ಅವರಿಗೆ ವೋಟ್ ಮಾಡಿರಲಿಲ್ಲ ಎಂದು ಖಟ್ಟರ್ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕುಲದೀಪ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ.

    ಮಾರ್ಕ್ ಜುಕರ್​ಬರ್ಗ್​ ವಿದಾಯ ಹೇಳಿದ ಬೆನ್ನಿಗೇ ಮೆಟಾ ಸಿಒಒ ವಿರುದ್ಧ ತನಿಖೆ ಶುರು!; ಆರೋಪಗಳೇನು?

    ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts