More

    ಮಾರ್ಕ್ ಜುಕರ್​ಬರ್ಗ್​ ವಿದಾಯ ಹೇಳಿದ ಬೆನ್ನಿಗೇ ಮೆಟಾ ಸಿಒಒ ವಿರುದ್ಧ ತನಿಖೆ ಶುರು!; ಆರೋಪಗಳೇನು?

    ನವದೆಹಲಿ: ಫೇಸ್​ಬುಕ್​ನ ಒಡೆತನ ಹೊಂದಿರುವ ಮೆಟಾ ಕಂಪನಿಯ ಸ್ಥಾಪಕ ಹಾಗೂ ಸಿಇಒ ಆಗಿರುವ ಮಾರ್ಕ್ ಜುಕರ್​ಬರ್ಗ್​ ಒಂದು ವಾರದ ಹಿಂದಷ್ಟೇ ಮೆಟಾ ಚೀಫ್​ ಆಪರೇಟಿಂಗ್ ಆಫೀಸರ್​ (ಸಿಒಒ) ಶೆರಿಲ್​ ಸ್ಯಾಂಡ್​​ಬರ್ಗ್​ ಕೆಲಸವನ್ನು ಮೆಚ್ಚಿ ಒಳ್ಳೆಯ ರೀತಿಯಲ್ಲೇ ವಿದಾಯ ಹೇಳಿದ್ದರು.

    ಆದರೆ ಇದೀಗ ಕಂಪನಿಯ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಮೆಟಾ ಲಾಯರ್​ಗಳು ಶೆರಿಲ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಸಲುವಾಗಿ ಈಗಾಗಲೇ ಕಂಪನಿಯ ಹಲವಾರು ಉದ್ಯೋಗಿಗಳ ವಿಚಾರಣೆ ನಡೆಸಲಾಗಿದೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್ ವರದಿ ಮಾಡಿದೆ.

    ಶೆರಿಲ್​ಗೆ ಸೇರಿದ ಲೀನ್​ ಇನ್​ ಫೌಂಡೇಷನ್​ನಲ್ಲಿ ಮತ್ತು ಆಕೆಯ ಪುಸ್ತಕ ‘ಆಪ್ಷನ್​ ಬಿ: ಫೇಸಿಂಗ್ ಅಡ್ವರ್ಸಿಟಿ, ಬಿಲ್ಡಿಂಗ್ ರೆಸಿಲಿಯೆನ್ಸ್ ಆ್ಯಂಡ್ ಫೈಂಡಿಂಗ್ ಜಾಯ್​’ ಪ್ರಮೋಷನ್​ನಲ್ಲಿ ಫೇಸ್​ಬುಕ್​ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಪೂರಕ ಎಂಬಂತೆ ಆಪ್ಷನ್​ ಬಿನಲ್ಲಿ ಫೇಸ್​ಬುಕ್​ನ ಹಲವಾರು ಉದ್ಯೋಗಿಗಳನ್ನು ಉಲ್ಲೇಖಿಸಲಾಗಿದೆ.

    ಶೆರಿಲ್​ ತನ್ನ ಹಳೆಯ ಪಾಲುದಾರ ಆ್ಯಕ್ಟಿವಿಷನ್​ ಸಿಇಒ ಬಾಬಿ ಕೊಟಿಕ್​ ವಿರುದ್ಧದ ನಕಾರಾತ್ಮಕ ಸುದ್ದಿಗಳನ್ನು ಇಲ್ಲವಾಗಿಸಲು ಫೇಸ್​ಬುಕ್​ ಮೀಡಿಯಾ ಟೀಮ್​ ಬಳಸಿಕೊಂಡಿದ್ದರು ಎಂಬ ಆರೋಪವೂ ಇದೆ. ಮಾತ್ರವಲ್ಲ ಇನ್ನೂ ಕೆಲವು ವೈಯಕ್ತಿಕ ವಿಷಯಗಳಿಗೆ ಕಂಪನಿಯ ಸಂಪನ್ಮೂಲವನ್ನು ಶೆರಿಲ್​ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

    ಶೆರಿಲ್ 14 ವರ್ಷಗಳಿಂದ ಜತೆಗಿದ್ದು, ಇದೀಗ ಬೇರೆಯಾಗುತ್ತಿದ್ದಾರೆ ಎಂದು ಜೂ. 2ರಂದು ಸುದೀರ್ಘ ಪೋಸ್ಟ್ ಮಾಡುವ ಮೂಲಕ ಮಾರ್ಕ್​ ಜುಕರ್​ಬರ್ಗ್ ವಿದಾಯ ಹೇಳಿದ್ದರು. ಫೇಸ್​ಬುಕ್​ಅನ್ನು ಸ್ಥಾಪಿಸಿ ಬೆಳೆಸುವುದರಲ್ಲಿ ಶೆರಿಲ್ ಪಾತ್ರ ಪ್ರಮುಖವಾಗಿತ್ತು. ಇದೀಗ ಆಕೆ ಕಂಪನಿ ತೊರೆಯಲಿರುವಂತೆ ಆರೋಪಗಳು ಕೇಳಿಬಂದಿರುವುದಷ್ಟೇ ಅಲ್ಲದೆ, ತನಿಖೆಯೂ ಆರಂಭವಾಗಿರುವುದು ಅಚ್ಚರಿ ಮೂಡಿಸಿದೆ.

    ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts