ಸ್ವರ್ಣ ಗರುಡ ವಾಹನ ಸಮರ್ಪಣಾ ಯಾತ್ರೆ

gan (2)
Published on

ಕುಂದಾಪುರ: ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಶ್ರೀ ಭದ್ರನರಸಿಂಹ ದೇವರಿಗೆ ಸಮರ್ಪಿಸುವ ಸ್ವರ್ಣ ಗರುಡ ವಾಹನ ಸಮರ್ಪಣಾ ಯಾತ್ರೆ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನಕ್ಕೆ ಶುಕ್ರವಾರ ಆಗಮಿಸಿತು.

ಊರಿನ ಹತ್ತು ಸಮಸ್ತರ ಪರವಾಗಿ ದೇವಸ್ಥಾನದ ಆಡಳಿತ ಮಂಡಳಿಯ ಜಿ.ಗೋವಿಂದ್ರಾಯ ಆಚಾರ್ಯ, ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಪೂಜೆ ಸಲ್ಲಿಸಿ ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಊರಿನ ಸಮಾಜದವರು ಸ್ವರ್ಣ ಗರುಡ ವಾಹನ ದರ್ಶನ ಪಡೆದು ಕಾಣಿಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಜಿ.ರಾಘವೇಂದ್ರ ಆಚಾರ್ಯ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net