25ರಂದು ಸಾಲಿಗ್ರಾಮ ಪಪಂ ಸುವರ್ಣ ಸಂಭ್ರಮ

kota (3)
Published on

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನಗರ ಸ್ಥಳೀಯಾಡಳಿತವಾಗಿ 50 ವರ್ಷ ಕಳೆದಿದ್ದು, ಈ ನಿಟ್ಟಿನಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಅ.25ರಂದು ಸಾಲಿಗ್ರಾಮ ಗುರುನರಸಿಂಹ ಬಯಲು ರಂಗಮಂದಿರದಲ್ಲಿ ಜರುಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುವರ್ಣ ಸಂಭ್ರಮ ಪ್ರಯುಕ್ತ ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ, ಪ್ರಬಂಧ, ರಂಗೋಲಿ ಸ್ಪರ್ಧೆ, ಗ್ರಾಮೀಣ ಜನರಿಗೆ ವಿವಿಧ ಸ್ಪರ್ಧೆ, ಜಾನಪದ ಕ್ರೀಡೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ವಾರ್ಡುವಾರು ಹಮ್ಮಿಕೊಳ್ಳಲಾಗಿದೆ ಎಂದರು.

ಸಾಹಿತಿ ಡಾ.ಕೆ.ಶಿವರಾಮ ಕಾರಂತ, ಭಾಗವತ ಕಾಳಿಂಗ ನಾವಡ, ಕಚೇರಿಗೆ ಸ್ಥಳ ನೀಡಿದ ದಾನಿ ಜನಾರ್ದನ ಮಧ್ಯಸ್ಥರ ಪುತ್ತಳಿ ಅನಾವರಣ, ಸಭಾ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ ಎಂದು ಪಪ .ಅಧ್ಯಕ್ಷೆ ಸುಕನ್ಯಾ ಜೆ.ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಸೂಯ ಹೇರ್ಳೆ, ಪ್ರಚಾರ ಸಮಿತಿಯ ಶ್ಯಾಮಸುಂದರ್ ನಾಯರಿ, ಸದಸ್ಯರಾದ ಕಾರ್ಕಡ ರಾಜು ಪೂಜಾರಿ, ಗಣೇಶ್, ರವೀಂದ್ರ ಕಾಮತ್, ಸಂಜೀವ ದೇವಾಡಿಗ, ಸಿಬ್ಬಂದಿ ಚಂದ್ರಶೇಖರ ಸೋಮಯಾಜಿ, ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net