ಉಪೇಕ್ಷಿತ ಬಂಧುಗಳ ಮನೆಗಳಿಗೆ ಸ್ವಾಮೀಜಿ ಭೇಟಿ

07
Published on

ಕಡಬ: ವಿಶ್ವ ಹಿಂದು ಪರಿಷತ್ ಧರ್ಮಪ್ರಸಾರ ವಿಭಾಗ ಪುತ್ತೂರು ಜಿಲ್ಲೆ ವತಿಯಿಂದ ಕಡಬ ಪ್ರಖಂಡದ ನೆಟ್ಟಣ ಸೇವಾ ಬಸ್ತಿಯಲ್ಲಿ ನಡೆದ ಸಂತ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಂಗಳೂರು ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಶಿವಜ್ಞಾನ ಮಹಿ ಮಾತಾಜಿ ಉಪೇಕ್ಷಿತ ಬಂಧುಗಳ ಮನೆಗಳಿಗೆ ಭೇಟಿ ನೀಡಿ ಹರಸಿದರು.

ಪ್ರಾಂತ ಧರ್ಮಪ್ರಸಾರ ಪ್ರಮುಖ್ ನಾರಾಯಣ ವರ್ಣೇಕರ್, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಸಹ ಕಾರ್ಯದರ್ಶಿ ಪ್ರಮೋದ್ ನಂದುಗುರಿ, ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ವಿಶಾಖ್ ಸಸಿಹಿತ್ಲು, ಸಹ ಪ್ರಮುಖ್ ರಾಧಾಕೃಷ್ಣ ಕೋಲ್ಪೆ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಸಂತೋಷ್ ಪೆರಿಯಡ್ಕ, ಸಹ ಸುರಕ್ಷಾ ಪ್ರಮುಖ್ ತಿಲಕ್ ನಂದುಗುರಿ, ಕಡಬ ಪ್ರಖಂಡ ಉಪಾಧ್ಯಕ್ಷ ಸತೀಶ್ ಎರ್ಕ, ಸತ್ಸಂಗ ಪ್ರಮುಖ್ ಸುಕೇಶ್ ಕುಮಾರ್, ಧರ್ಮ ಪ್ರಸಾರ ಪ್ರಮುಖ್ ರೇಖಾ ಅಡ್ಡಹೊಳೆ, ಮಾತೃಶಕ್ತಿ ಸಹ ಪ್ರಮುಖ್ ಪವಿತ್ರಾ ಸಿರಿಬಾಗಿಲು, ವಿಹಿಂಪ ಸಹ ಕಾರ್ಯದರ್ಶಿ ಲಕ್ಷ್ಮೀಶ ಇಜಿನಡ್ಕ, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಬಿಳಿನೆಲೆ, ಪ್ರಮುಖರಾದ ವಾಡ್ಯಪ್ಪ ಎರ್ಮೈಲ್, ಪ್ರಸಾದ್ ನೆಟ್ಟಣ, ರಮೇಶ್ ವಾಲ್ತಾಜೆ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net