

ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ, ರಿಷಿಕಲಾ ಕೇಂದ್ರ ಮಂಗಳೂರು ಹಾಗೂ ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಮುಲ್ಲಕಾಡು ಇದರ ಜಂಟಿ ಆಶ್ರಯದಲ್ಲಿ ಆಟಿದ ಗೇನ- 2025 ಕಾರ್ಯಕ್ರಮವನ್ನು ನಗರದ ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಸಭಾಂಗಣದಲ್ಲಿ ನಡೆಸಲಾಯಿತು.
ತುಳು ಚಿಂತಕ, ದೈವಾರಾಧಕ ತಮ್ಮಣ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಆಟಿ ಅನಿಷ್ಟ ತಿಂಗಳಲ್ಲ ಒಳ್ಳೆಯ ತಿಂಗಳು. ಅನಿಷ್ಟ ಅನ್ನೋದು ನಮ್ಮ ತಪ್ಪು ಕಲ್ಪನೆ. ಆದರೆ ಜನರಿಗೆ ಸ್ವಲ್ಪ ಕಷ್ಟ ಇತ್ತೇ ಹೊರತು ಅನಿಷ್ಟದ ತಿಂಗಳಲ್ಲ. ಎಲ್ಲಾ ರೀತಿಯ ಆರಾಧನಾ ವಿಶೇಷಗಳು ಆರಂಭವಾಗುವ ಕಾಲವೂ ಆಟಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮನಪಾ ಮಾಜಿ ಸದಸ್ಯ ದೀಪಕ್ ಪೂಜಾರಿ ಮಾತನಾಡಿ, ಆಟಿಯ ಕಾಲ ಬಹಳ ಕಷ್ಟದ ದಿನಗಳು. ಈ ಸಂದರ್ಭ ತಿನ್ನಲು ಏನೂ ಇಲ್ಲದ ಕಾಲದಲ್ಲಿ ಜನರು ಮನೆಯ ಸುತ್ತಮುತ್ತಲೂ ಸಿಕ್ಕುವುದನ್ನೇ ಆಹಾರವಾಗಿ ಬಳಸಿದರು. ಆದರೆ ನಾವಿಂದು ಅದೇ ಆಹಾರವನ್ನು ಆಟಿ ಆಚರಣೆಯ ಸಂದರ್ಭ ಸೇವಿಸುತ್ತೇವೆ ಹೇಳಿದರು.
ತುಲುವೆರ್ ಕುಡ್ಲದ ಸಂಸ್ಥಾಪಕ ಅಧ್ಯಕ್ಷ ಪ್ರತೀಕ್ ಯು ಪೂಜಾರಿ, ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉಸ್ಮಾನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲ್ ಹೆಚ್, ಬಿಎಲ್ ನಿವೃತ್ತ ಅಧಿಕಾರಿ ಪದ್ಮನಾಭ, ಬಿಜೈ ಹೆಲ್ತ್ ಕೇರ್ ಲ್ಯಾಬೋರೇಟರಿಯ ರೋಹಿತ್ ಸುವರ್ಣ, ರಿಷಿ ಕಲಾಕೇಂದ್ರದ ಅಧ್ಯಕ್ಷೆ ವಸುಧಾ ಯು. ಶೆಟ್ಟಿ, ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಾಮ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು.
ಹಿರಿಯ ಪಾಡ್ದನ ಕಲಾವಿದೆ ಲಲಿತಾ ಇವರನ್ನು ರಿಷಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ರಿಷಿ ಕಲಾಕೇಂದ್ರದ ಪದಾಧಿಕಾರಿಗಳಾದ ವನಿತಾ ಶೆಟ್ಟಿ, ನಯನ, ಜಯಂತಿ, ಸಂಗೀತ ಹಾಗೂ ಮುಲ್ಲಕಾಡು ಫ್ರೆಂಡ್ಸ್ ಸರ್ಕಲ್ ನ ಪದಾಧಿಕಾರಿಗಳಾದ ಪ್ರಸಾದ ದೇವಾಡಿಗ ಗಣೇಶ ಆಳ್ವ, ಚರಣ್, ರಮೇಶ್, ಜನಾರ್ಧನ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಹಿರಿಯ ಕಲಾವಿದೆ ಲಲಿತಾ ಅವರಿಂದ ಪಾಡ್ದನ ಹಾಗೂ ರಿಷಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಆಟಿ ತಿಂಗಳ ವಿಶೇಷ 25ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ಉಣಬಡಿಸಲಾಯಿತು.
ಸುಪ್ರೀತಾ ಸ್ವಾಗತಿಸಿದರು. ಸುಜಿತ್ ದೇವಾಡಿಗ ವಂದಿಸಿದರು. ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.