

ಮಂಗಳೂರು: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ನಲ್ಲಿರುವ ಫ್ಲಾಟ್ನಲ್ಲೇ ಸುರೇಂದ್ರ ಬಂಟ್ವಾಳ್ ಕೊಲೆಯಾಗಿದೆ. ಹಣಕಾಸು ವಿಚಾರಕ್ಕೆ ಜೊತೆಗಿದ್ದವರಿಂದಲೇ ಬಂಟ್ವಾಳ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಸವರ್ಣದೀರ್ಘ ಸಂಧಿ ಕನ್ನಡ ಚಿತ್ರ ಸೇರಿ ಹಲವು ತುಳು ಸಿನಿಮಾದಲ್ಲಿ ನಟಿಸಿದ್ದ ಸುರೇಂದ್ರ ಬಂಟ್ವಾಳ್, ಈ ಹಿಂದೆ ಹಿಂದುಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
2018ರ ಜೂನ್‌ನಲ್ಲಿ ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದ ಬಂಟ್ವಾಳ್ರ ವಿಡಿಯೋ ಅಂದು ವೈರಲ್ ಆಗಿತ್ತು. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಸುರೇಂದ್ರ ಬಂಟ್ವಾಳ್, ಜಾಮೀನಿನ ಮೇಲೆ ಹೊರ ಬಂದಿದ್ದರು.