ಆತ್ಮಹತ್ಯೆ ಯತ್ನಿಸಿದಾತ ಕುಣಿಕೆ ತುಂಡಾಗಿ ಬಿದ್ದು ಸಾವು

hang
Published on

ಉಡುಪಿ: ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಯ ಕಬ್ಬಿಣದ ಅಡ್ಡಪಟ್ಟಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲನಿಯ ಮೆಲ್ರಾಯ್(55) ಎಂಬುವರು ನೇಣುಕುಣಿಕೆ ತಂಡಾಗಿ 20 ಅಡಿ ಆಳದ ಮನೆಯ ಹೊರಾಂಗಣಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ನೇಣು ಹಾಕಿಕೊಂಡಾಗ ಭಾರಕ್ಕೆ ಕುಣಿಕೆ ತುಂಡಾಗಿದೆ. ಕೆಳಗೆ ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಂಗಾಗ ದಾನ ವಾಗ್ದಾನ

ಮೆಲ್ರಾಯ್ 2018ರಲ್ಲಿ ನವದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗೆ ಮರಣಾನಂತರ ಅಂಗಾಂಗ ದಾನ ವಾಡಲು ವಾಗ್ದಾನ ಮಾಡಿದ್ದರು. ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಂಗಾಗ ದಾನ ಪ್ರತಿಜ್ಞಾ ಪತ್ರವನ್ನೂ ಪಡೆದಿದ್ದರು. ಸ್ಥಳದಲ್ಲಿ ಲಭ್ಯವಾಗಿರುವ ದಾನಪತ್ರದಲ್ಲಿ ಯಕೃತ್ತು, ಕರುಳು, ಕಣ್ಣು, ಚರ್ಮ, ಮೂಳೆ, ಹೃದಯ ಕವಾಟ, ರಕ್ತನಾಳ ದಾನದ ಉಲ್ಲೇಖವಿದೆ.

ಮಣಿಪಾಲ ಪೊಲೀಸ್ ಠಾಣೆ ಪಿಎಸ್‌ಐ ಅನಿಲ್ ಕುಮಾರ್, ಎಎಸ್‌ಐ ನಾಗೇಶ್ ನಾಯ್ಕ, ಸಿಬ್ಬಂದಿ ವಿದ್ಯಾ ಕಾನೂನು ಪ್ರಕ್ರಿಯೆ ನಡೆಸಿದರು. ವಿಧಿ ವಿಜ್ಞಾನ ತಜ್ಞರಾದ ಪ್ರಸನ್ನ, ಲಾವಣ್ಯಾ, ಹರೀಶ್ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net