ಮಾರ್ಗದರ್ಶನ, ಗುರಿ ಇದ್ದರೆ ಯಶಸ್ಸು ಸಾಧ್ಯ: ಪ್ರಭುಲಿಂಗ ಕವಳಿಕಟ್ಟಿ ಸಲಹೆ

upsc
Published on

ಬೆಂಗಳೂರು: ಸೂಕ್ತ ಮಾರ್ಗದರ್ಶನ, ಗುರಿ ಇದ್ದರೆ ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಹಾಗೂ ಐಎಎಸ್​ ಅಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.

ಯುನಿವರ್ಸಲ್​ ಸಮೂಹ ಸಂಸ್ಥೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್​ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಉತ್ತಮ ವಿದ್ಯೆ, ಸಂಸ್ಕಾರ ಯಶಸ್ಸಿನ ಗುಟ್ಟು. ಪ್ರತಿ ವಿದ್ಯಾರ್ಥಿ ಬಗ್ಗೆ ಅವರ ಸಮಾಜ, ಹೆತ್ತವರಿಗೆ ಅಪಾರ ನಿರೀಕ್ಷೆ ಇರುತ್ತದೆ. ಅದನ್ನು ಶ್ರದ್ದೆ, ಕಾಯಕ, ಕಠಿಣ ಪರಿಶ್ರಮದ ಮೂಲಕ ಈಡೇರಿಸಲು ಪ್ರಯತ್ನಿಸಬೇಕು. ಯಶಸ್ಸಿಗೆ ಡೊಂಕು ದಾರಿಗಳಿಲ್ಲ. ನೇರ,ಕಠಿಣ ದಾರಿಯೇ ಎಲ್ಲರ ಮುಂದಿರುತ್ತದೆ. ಅದನ್ನು ಎದುರಿಸಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ಆರ್​.ಉಪೇಂದ್ರ ಶೆಟ್ಟಿ ಮಾತನಾಡಿ, ದೇಶಕ್ಕೆ ದಿಟ್ಟ ವ್ಯಕ್ತಿತ್ವ ಹೊಂದಿರುವ ಅಧಿಕಾರಿಗಳನ್ನು ನೀಡುತ್ತಿದ್ದು, ಈ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅಳಿಲು ಸೇವೆ ಸಲ್ಲಿಸಲಾಗುತ್ತಿದೆ ಎಂದರು. ಯುಪಿಎಸ್ಸಿ ಪರೀಕ್ಷೆಯಲ್ಲಿ 121ನೇ ರ್ಯಾಂಕ್​ ಪಡೆದ ಶಾಶ್ವತ್​, 384ನೇ ರ್ಯಾಂಕ್​ ಪಡೆದ ಅಂಕುರ್​ ಕುಮಾರ್​ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net