ಮಂಡೆಕೋಲಿನಲ್ಲಿ ಆನೆಗಳ ಉಪಟಳ: ಕೃಷಿ ನಾಶ

web - krishi haani
Published on

ಸುಳ್ಯ: ತಾಲೂಕಿನ ಮಂಡೆಕೋಲಿನಲ್ಲಿ ಆನೆಗಳ ಉಪಟಳ ಮಿತಿಮೀರುತ್ತಿದ್ದು, ಶನಿವಾರ ರಾತ್ರಿ ಗ್ರಾಮದ ಪಂಜಿಕಲ್ಲು ಯೋಗೀಶ್ ಅವರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ.

ಮಧ್ಯರಾತ್ರಿ ವೇಳೆಗೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಅಡಕೆ, ತೆಂಗು ಹಾಗೂ ಬಾಳೆಗಿಡಗಳನ್ನು ಧ್ವಂಸಗೊಳಿಸಿವೆ. ಎರಡು ದಿನಗಳ ಹಿಂದೆ ಕುದನಕೋಡಿ ಬಳಿಯ ಶುಭಕರ ಬೊಳುಗಲ್ಲು ಅವರ ತೋಟಕ್ಕೂ ನುಗ್ಗಿದ ಆನೆಗಳನ್ನು ಕೃಷಿ ಬೆಳೆಗಳನ್ನು ಹಾನಿಗೊಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net