ವಾಹನ ಡಿಕ್ಕಿಯಾಗಿ ಅಪರಿಚಿತ ಮೃತ್ಯು

Dead body
Published on

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಗ್ರಾಮದ ಕಲ್ಸಂಕ ಬಳಿ ಶುಕ್ರವಾರ ತಡರಾತ್ರಿ ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಅಪಘಾತ ನಡೆಸಿದ್ದ ವಾಹನ ಪರಾರಿಯಾಗಿದ್ದು, ಇತರ ವಾಹನಗಳ ಸಂಚಾರದಿಂದ ವ್ಯಕ್ತಿಯ ದೇಹ 25 ಮೀಟರ್‌ನಷ್ಟು ದೂರ ಎಳೆದೊಯ್ಯಲ್ಪಟ್ಟು ದೇಹ ಛಿದ್ರಗೊಂಡಿತ್ತು. ಮೃತದೇಹದ ಮೇಲೆ ಬಿಳಿ ಬಣ್ಣದ ಕಪ್ಪು ಗೆರೆಗಳಿರುವ ಚೌಕಳಿ ಶರ್ಟ್ ಮತ್ತು ಲುಂಗಿ ಇದ್ದು, ಮೃತದೇಹ ಪರಿಶೀಲಿಸಿದಾಗ ಯಾವುದೇ ದಾಖಲಾತಿ ದೊರೆತಿಲ್ಲ. ಬೆಳಗ್ಗೆಯಿಂದ ಪಡುಬಿದ್ರಿ ಪೇಟೆಯ ಕಡೆಯಲ್ಲಿ ಸದ್ರಿ ವ್ಯಕ್ತಿ ಸುತ್ತಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಮೃತದೇಹವನ್ನು ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net