ಗಲಾಟೆ ಮಾಡಿದ ಎನ್ನುವ ಕಾರಣಕ್ಕೆ ಆರು ವರ್ಷದ ಮಗನನ್ನು ಬೆಲ್ಟ್​ನಿಂದ ಹೊಡೆದು ಕೊಂದ ಮಲತಂದೆ!

kid
Published on

ನೆಲಮಂಗಲ: ಹೆಂಡತಿಯ ಮೊದಲನೇ ಸಂಸಾರದ ಮಗ ಗಲಾಟೆ ಮಾಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಮಲತಂದೆ ಆತನನ್ನು ಬೆಲ್ಟ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ನೆಲಮಂಗಲದ ಬಿನ್ನಮಂಗಲದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಹರ್ಷವರ್ಧನ್ (6) ಮೃತ ಬಾಲಕ. ಈತನ ತಾಯಿ ನೇತ್ರಾ ಮೊದಲನೇ ಗಂಡನನ್ನು ತೊರೆದು ಒಂದೂವರೆ ವರ್ಷವಾಗಿತ್ತು. ಎರಡು ತಿಂಗಳ ಹಿಂದೆ ಕಾರ್ತಿಕ್(23) ಹೆಸರಿನ ಯುವಕನ ಜತೆ ಮದುವೆಯಾದ ನೇತ್ರಾ ಆತನೊಂದಿಗೆ ಸಂಸಾರ ಆರಂಭಿಸಿದ್ದಳು.

ಶುಕ್ರವಾರ ಸಂಜೆ ವೇಳೆ ಹರ್ಷವರ್ಧನ್​ ಗಲಾಟೆ ಮಾಡುತ್ತಿದ್ದನಂತೆ. ಅದೇ ಕಾರಣಕ್ಕೆ ಕಾರ್ತಿಕ್​ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆಲ್ಟ್​ನಿಂದ ಮನಸೋಇಚ್ಛೆ ಹೊಡೆದಿದ್ದಾನೆ. ತೀವ್ರ ರಕ್ತಸ್ತ್ರಾವದಿಂದ ಬಾಲಕ‌ ಹರ್ಷವರ್ದನ್ ಮನೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಆರೋಪಿ ಕಾರ್ತಿಕ್ ನೆಲಮಂಗಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲ ಟೌನ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net