More

    ಕಲ್ಲು ಬಂಡೆ ಇರುವ ಪ್ರದೇಶದಲ್ಲಿ ಗಿಡಗಳು ಕಡಿಮೆಯೇಕೆ? ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..

    ಮುಂದುವರಿದ ಭಾಗ..

    ಕಲ್ಲು ಬಂಡೆ ಇರುವ ಪ್ರದೇಶದಲ್ಲಿ ಗಿಡಗಳು ಕಡಿಮೆಯೇಕೆ? ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..ಸಸ್ಯಗಳಿಗೆ ದ್ಯುತಿಸಂಶ್ಲೇಷಣೆ ಮಾಡಲು ನೇರವಾಗಿ ಸೂರ್ಯನ ಕಿರಣಗಳು ಬೇಕೇ ಬೇಕು ಎಂದೇನಿಲ್ಲ, ಆದರೆ ಕನಿಷ್ಠ ಉಷ್ಣಾಂಶವಿರಲೇಬೇಕು. ಮಳೆಗಾಲದಲ್ಲಿ ಬಿಸಿಲು ಕಡಿಮೆ ಇದ್ದರೂ ಉಷ್ಣಾಂಶವಿರುತ್ತದೆ, ಮೋಡಗಳು ಹೆಚ್ಚಿರುವುದರಿಂದ ಹಸಿರುಮನೆ ಪರಿಣಾಮ ಉಂಟಾಗಿ ಉಷ್ಣಾಂಶ ಏರುವುದರಿಂದ ದ್ಯುತಿಸಂಶ್ಲೇಷಣೆ ನಡೆಯುತ್ತದೆ. ನಮ್ಮ ರಾಜ್ಯದಲ್ಲಿ ಮಳೆಗಾಲದಲ್ಲಿಯೂ ಕೂಡ 20 ಡಿಗ್ರಿಗೂ ಹೆಚ್ಚು ಉಷ್ಣಾಂಶ ಇದ್ದೇ ಇರುತ್ತದೆ, ಆದ್ದರಿಂದ ದ್ಯುತಿಸಂಶ್ಲೇಷಣೆ, ಉಸಿರಾಟ ನಡೆದೇ ನಡೆಯುತ್ತದೆ.

    ಆದರೆ ನಾವು ಗಮನದಲ್ಲಿಡಬೇಕಾದ ಒಂದು ಮುಖ್ಯವಾದ ವಿಷಯವೆಂದರೆ, ಪ್ರತಿಯೊಂದು ಸಸ್ಯಗಳ ಜೀವನಶೈಲಿ ಬೇರೆ ಬೇರೆ ಇರುತ್ತದೆ. ಸಸ್ಯಗಳ ವಿಚಾರದಲ್ಲಿ ನಾವು ಸಾರಾಸಗಟಾಗಿ ಒಂದೇ ತೀರ್ಮಾನಕ್ಕೆ ಬರಬಾರದು. ಕೆಲವು ಸಸ್ಯಗಳಿಗೆ ಕಡಿಮೆ ಉಷ್ಣಾಂಶವಿದ್ದರೆ ಸಾಕು, ಕೆಲವು ಸಸ್ಯಗಳಿಗೆ ಹೆಚ್ಚು ಉಷ್ಣಾಂಶ ಬೇಕು, ಕೆಲವು ಸಸ್ಯಗಳಿಗೆ ಹಗಲು ಕಡಿಮೆ ಇರಬೇಕು, ಕೆಲವು ಸಸ್ಯಗಳಿಗೆ ಹಗಲು ಜಾಸ್ತಿ ಇರಬೇಕು. ಹೆಚ್ಚು ಕಲ್ಲುಬಂಡೆಗಳಿರುವ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿಯಲ್ಲಿ ಉಷ್ಣಾಂಶದ ಹೆಚ್ಚು ಏರಿಳಿತವಿರುವುದರಿಂದ ಅಲ್ಲಿ ಎಲ್ಲ ಜಾತಿಯ ಸಸ್ಯಗಳು ಬೆಳೆಯುವುದಿಲ್ಲ. ಆದ್ದರಿಂದಲೇ ಒಂದೊಂದು ಪ್ರದೇಶದಲ್ಲಿ ಒಂದೊಂದು ಜಾತಿಯ ಸಸ್ಯಗಳು ಬೆಳೆಯುತ್ತವೆ. ಎತ್ತರದ ಪ್ರದೇಶಗಳಲ್ಲಿ ಉಷ್ಣಾಂಶ ಕಡಿಮೆಯಾಗುವುದರಿಂದ ಅಲ್ಲಿ ಎಲ್ಲ ಜಾತಿಯ ಸಸ್ಯಗಳು ಬೆಳೆಯಲಾಗುವುದಿಲ್ಲ.

    ನಾವು ಕೇವಲ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತ್ರ ಯೋಚಿಸಬಾರದು. ಸಸ್ಯಗಳಲ್ಲಿ ಎಲೆಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬೇರುಗಳು ಮತ್ತು ಹೂವುಗಳು. ವಾತಾವರಣದ ಉಷ್ಣಾಂಶದಲ್ಲಿ ಹೆಚ್ಚೂ ಕಡಿಮೆಯಾದರೆ ಸಸ್ಯಗಳಲ್ಲಿ ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ ಹೆಚ್ಚೂ ಕಮ್ಮಿಯಾಗಿ, ಬೇರುಗಳು ಮಣ್ಣಿನಿಂದ ತೆಗೆದುಕೊಳ್ಳುವ ಲವಣಾಂಶಗಳ ಪ್ರಮಾಣದಲ್ಲಿ ಹೆಚ್ಚೂ ಕಮ್ಮಿಯಾಗಿ ಸಸ್ಯಗಳು ರೋಗಕ್ಕೆ ತುತ್ತಾಗುತ್ತವೆ. ಸಸ್ಯಗಳು ಒಂದೊಂದು ರೀತಿಯ ಉಷ್ಣಾಂಶದಲ್ಲಿ ಒಂದೊಂದು ರೀತಿಯ ಖನಿಜಾಂಶಗಳನ್ನು ತೆಗೆದುಕೊಳ್ಳಲು ಶಕ್ತವಾಗುತ್ತವೆ. ಒಂದೊಂದು ಖನಿಜಾಂಶ ಕಡಿಮೆಯಾದರೆ ಒಂದೊಂದು ರೀತಿಯ ರೋಗಗಳು ಬರುತ್ತವೆ. ಆಗ ಎಲೆಗಳು ಉದುರಿ ತನ್ನ ಆಹಾರವನ್ನು ತಯಾರಿಸಲಾಗದೆ ಸಸ್ಯದ ಇತರ ಎಲ್ಲ ಭಾಗಗಳು ನಿಶ್ಯಕ್ತಗೊಳ್ಳುತ್ತವೆ. ನಂತರ ಎಲ್ಲ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಿಕೊಳ್ಳಲಾಗದೆ ರೋಗಿಗಳಾಗುತ್ತವೆ, ಆಗ ಇತರ ಕೀಟಗಳು ಸಸ್ಯವನ್ನು ಆಕ್ರಮಿಸಿ ಒಂದೊಂದೇ ಭಾಗವನ್ನು ತಿಂದು ಸಾಯಿಸುತ್ತವೆ.

    ಗಿಡಗಳಿಗೆ ನೀರನ್ನು ಬೆಳಗ್ಗೆಯೇ ಏಕೆ ಕೊಡಬೇಕು? ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts