ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ದೀಪಾವಳಿಗೆ ಬೆಳಗಿದ್ದು ಕುಂದಾಪುರದ ಕಾಲುದೀಪ!

Biden
Published on
ಕುಂದಾಪುರ: ಎಲ್ಲಿಯ ಅಮೆರಿಕ ಮತ್ತೆಲ್ಲಿಯ ಪುಟ್ಟಹಳ್ಳಿ ಕಕ್ಕುಂಜೆ. ಎತ್ತಂದೆತ್ತಣ ಸಂಬಂಧವಯ್ಯಾ..! ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಕ್ಕುಂಜೆ ಎಂಬ ಪುಟ್ಟಹಳ್ಳಿಯ ಕಾಲುದೀಪದಲ್ಲಿ ಅಮೆರಿಕ ಪ್ರಥಮ ಪ್ರಜೆ ಜೋ ಬೈಡನ್ ದೀಪಾವಳಿಯಲ್ಲಿ ದೀಪಹಚ್ಚಿ ವಿಶ್ವಮಾನ್ಯತೆ ತಂದು ಕೊಟ್ಟಿದ್ದಾರೆ.

ಕುಂದಾಪುರ ಪ್ರತಿಷ್ಠಿತ ಅಡಿಗ ಮನೆತನದ ಕಾಲು ದೀಪ ಸಮುದ್ರೋಲ್ಲಘನ ಮಾಡಿದ ಕತೆಯೇ ರೋಚಕ. ಪ್ರಪಂಚದ ದೊಣ್ಣನ ಜೊತೆ ಪುರಾತನ ಕಾಲುದೀಪ ಸಂಬಂಧ ಬೆಳೆಸಿದೆ. ದೀಪದ ಸಂಬಂಧ ಬೆಳೆಸಿದವರು ಜೋ ಬೈಡನ್ ಪತ್ನಿ ಜಿಲ್ ಬೈಡನ್. ಕಕ್ಕುಂಜೆ ಮಾಲಾ ಅಡಿಗ ಸಂಬಂಧ ಜೋಡಿಸಿದವರು. ಅತ್ತೆಗೆ ಬಂದ ಕಾಲುದೀಪವನ್ನು ಮಾಲಾ ಅಡಿಗ ಅಮೆರಿಕಕ್ಕೆ ತೆಗೆದುಕೊಂಡು ಹೋಗಿದ್ದರು.

ಇದನ್ನೂ ಓದಿ: ಅಯೋಧ್ಯೆಯ ಬ್ರಹ್ಮರಥ ನಿರ್ಮಾಣಕ್ಕೆ ಇಂದು ಕುಂದಾಪುರದ ಕುಂಭಾಶಿಯಲ್ಲಿ ಚಾಲನೆ: ಶ್ರೀರಾಮನಿಗಾಗಿ ವಿಶ್ವದ ಅತಿ ಎತ್ತರದ ರಥ

ಕರ್ನಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಕಕ್ಕುಂಜೆ ದಿ.ಸೂರ್ಯನಾರಾಯಣ ಅಡಿಗ ಹುಟ್ಟಿದ ಮನೆಯಲ್ಲಿದ್ದ ಕಾಲುದೀಪ ಮಾಲಾ ಅಡಿಗರ ಅತ್ತೆಗೆ ಬಳುವಳಿಯಾಗಿ ಸಿಕ್ಕಿತ್ತು. ಕಕ್ಕುಂಜೆ ಮನೆತನದ ಡಾ.ರಮೇಶ್ ಅಡಿಗ ಮಗಳು ಮಾಲಾ ಅಡಿಗ. ಡಾ.ರಮೇಶ್ ಅಡಿಗ ಅಮೆರಿಕದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮರೆತವರಲ್ಲ. ಹಾಗಾಗಿ ಕುಂದಾಪುರ ದಿ.ಚಂದ್ರಶೇಖರ ಅಡಿಗರ ಪತ್ನಿ ಮಾಲಾ ಅಡಿಗರ ತಾಯಿಗೆ ಪುರಾತನ ಕಾಲುದೀಪ ಬಳುವಳಿಯಾಗಿ ನೀಡಿದ್ದರು. ಅದೇ ಕಾಲುದೀಪ ಜೋ ಬೈಡನ್ ಹಾಗೂ ಜಿಲ್ ಬೈಡನ್ ಬೆಳಗಿಸಿ ಭಾರತೀಯರಿಗೆ ಶುಭಾಶಯ ಕೋರಿದ್ದರು. ದೀಪಾವಳಿ ಹಿನ್ನೆಲೆಯಲ್ಲಿ ಜಿಲ್ ಬೈಡನ್ ದೀಪ ಹಚ್ಚಲು ದೀಪದ ಬೇಡಿಕೆ ಇಟ್ಟಿದ್ದರಿಂದ ಮಾಲಾ ಅಡಿಗ ತಮ್ಮ ಮನೆಯಲ್ಲಿದ್ದ ಕಾಲು ದೀಪ ಒದಗಿಸಿದ್ದರು.

https://www.vijayavani.net/owner-staff-of-theatres-from-all-over-state-mourned-for-puneeth-rajakumar-demise/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net