

ಉಪ್ಪಿನಂಗಡಿ: ನಮ್ಮಲ್ಲಿರುವ ವಿವಿಧ ಸಂಸ್ಕೃತಿ ವಿವಿಧ ಆಚಾರ ವಿಚಾರಗಳಲ್ಲಿನ ಸಾಮರಸ್ಯದ ಬದುಕು ಇಡೀ ವಿಶ್ವವೇ ಗೌರವಿಸುತ್ತಿದ್ದು, ವಿಶ್ವಮಾನ್ಯ ಸಂಸ್ಕೃತಿಯ ವಾರಸುದಾರರು ನಾವೆಂಬ ಅಭಿಮಾನ ನಮ್ಮಲ್ಲಿರಬೇಕೆಂದು ಚಿಂತಕ ಡಾ.ರವೀಶ್ ಪಡುಮಲೆ ತಿಳಿಸಿದರು.
ಉಪ್ಪಿನಂಗಡಿಯ ರಾಮನಗರದ 30ನೇ ವಷರ್ದ ಸಾರ್ವಜನಿಕ ಶ್ರೀ ಶಾರದೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಪ್ರಸನ್ನ ಕುಮಾರ್ ದರ್ಬೆ ಮಾತನಾಡಿ, ಸಂಕುಚಿತ ಮನೋಭಾವ ತೊರೆದು ಧರ್ಮದ ರಕ್ಷಣೆಯ ಬಗ್ಗೆ ಚಿಂತಿಸೋಣ. ಸಂಘಟಿತರಾಗಿ ಎಲ್ಲರೂ ಜತೆಯಾಗಿ ಧರ್ಮವನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಮಾಡಬೇಕೆಂದು ಹೇಳಿದರು.
ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ನಿರಂಜನ್ ರೈ ಮತ್ತು ಸಮಿತಿ ಗೌರವಾಧ್ಯಕ್ಷ ಎನ್.ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ ಉಪಸ್ಥಿತರಿದ್ದರು.
ದೀಪಕ್ ಪೈ ಯು., ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಗಣೇಶ್ ಭಂಡಾರಿ, ಶ್ಯಾಮಲಾ ಶೆಣೈ, ಜಯಂತ ಪೊರೋಳಿ, ಗಣೇಶ್ ಶೆಣೈ, ರಘುರಾಮ್, ಸಚಿನ್ ಕೋಟೆ, ಧನಂಜಯ ನಟ್ಟಿಬೈಲ್, ಅಭಿಲಾಷ್, ಯತೀಶ್ ಶೆಟ್ಟಿ, ನೈತಿಕ್ ಶೆಟ್ಟಿ, ಸವಿತಾ ಮಹಾಬಲ ಶೆಟ್ಟಿ, ಉಷಾ ಕಿರಣ, ಕೃಷ್ಣಪ್ಪ ಹರಿನಗರ, ಹರಿರಾಮಚಂದ್ರ ಮೊದಲಾದವರು ಭಾಗವಹಿಸಿದ್ದರು.