

ಬೆಳ್ತಂಗಡಿ: ಉನ್ನತ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ಸಂಖ್ಯಾಶಾಸ್ತ್ರದ ಸ್ಥಾನ ಮಹತ್ವದ್ದಾಗಿದೆ ಎಂದು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಕುರಿತಾಗಿ ಎಸ್‌ಡಿಎಂ ಐಟಿ ಕಾಲೇಜಿನ ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಪದ್ಮಪ್ರಸಾದ್ ಹೇಳಿದರು.
ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಆಯೋಜಿಸಿದ್ದ ಸ್ಟಾಟ್ ಎಕ್ಸ್‌ಪ್ಲೋರ್ ಹಾಗೂ ವಿಭಾಗ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ವಾತನಾಡಿದರು.
ಎಸ್‌ಡಿಎಂ ಕಾಲೇಜಿನ ಡೀನ್ ಪ್ರೊ.ವಿಶ್ವನಾಥ್ ಪಿ. ಉದ್ಘಾಟಿಸಿ, ಸಂಖ್ಯಾಶಾಸ್ತ್ರ ವಿವಿಧ ವಲಯಗಳಲ್ಲಿ ಬೇಡಿಕೆಯನ್ನು ವಿಸ್ತರಿಸುತ್ತಿದೆ. ವೈದ್ಯಕೀಯ ಹಾಗೂ ಸಂಶೋಧನಾ ವಿಭಾಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿದೆ ಎಂದರು.
ಸಂಖ್ಯಾಶಾಸ್ತ್ರ ವಿಭಾಗದ ಸ್ಟಾಟ್‌ಎಕ್ಸ್‌ಪ್ಲೋರ್ ಅಸೋಸಿಯೇಷನ್ಸ್ ಉದ್ಘಾಟನೆಯಲ್ಲಿ ಮುಸಿಗ್ಮಾ ವಿಭಾಗದ ಭಿತ್ತಿಪತ್ರವನ್ನು ಅನಾವರಣಗೊಳಿಸಿದರು. ಎಸ್.ಡಿ.ಎಂ. ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್.ಎನ್.ಕಾಕತ್ಕರ್, ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಕುವಾರಿ ಹಾಗೂ ಸಹ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಾದ ಅನನ್ಯಾ ಸ್ವಾಗತಿಸಿದರು. ವೀಕ್ಷಿತಾ ನಿರೂಪಿಸಿದರು. ದಿವ್ಯಾ ಸುಧೀರ್ ವಂದಿಸಿದರು.
ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್‌ನಲ್ಲಿ ಅಂಕಿಅಂಶಗಳು ಪ್ರಾಮುಖ್ಯತೆ ಹೊಂದಿವೆ. ಸಂಖ್ಯಾಶಾಸ್ತ್ರದ ವಾಡೆಲ್‌ಗಳು ಹಾಗೂ ಅಂಕಿಅಂಶಗಳ ಪ್ರಮೇಯಗಳು ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್‌ನಲ್ಲಿ ಅಳವಡಿಕೆಯ ಅರಿವು ವಿದ್ಯಾರ್ಥಿಗಳಿಗೆ ಅಗತ್ಯ. ಪ್ರೊ.ಪದ್ಮಪ್ರಸಾದ್, ಸಹಾಯಕ ಪ್ರಾಧ್ಯಾಪಕ.